ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಧಾ ಪೊಲೀಸ್ ಕಮಿಷನರೇಟ್'ನಲ್ಲಿ 300 ಸಿಬ್ಬಂದಿ ವರ್ಗಾವಣೆ

Last Updated 15 ಜೂನ್ 2022, 10:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಧಾ ಪೊಲೀಸ್ ಕಮಿಷನರೇಟ್'ನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ 300 ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆಗೆ ಅಂತಿಮಗೊಳಿಸಲಾಗಿದೆ.

36 ಎಎಸ್ಐ, 197 ಹೆಡ್ ಕಾನ್'ಸ್ಟೆಬಲ್ ಮತ್ತು 67 ಕಾನ್'ಸ್ಟೆಬಲ್'ಗಳ ಹೆಸರು ವರ್ಗಾವಣೆಯ ಅಂತಿಮ ಪಟ್ಟಿಯಲ್ಲಿವೆ. ಧಾರವಾಡ ವಿದ್ಯಾಗಿರಿ ಠಾಣೆಯಿಂದ 21, ಹುಬ್ಬಳ್ಳಿ ಶಹರ ಠಾಣೆಯಿಂದ 20, ಹಳೇಹುಬ್ಬಳ್ಳಿ ಠಾಣೆಯಿಂದ 18 ಹಾಗೂ ನಾಲ್ಕು ಸಂಚಾರ ಠಾಣೆಗಳಿಂದ 10 ಎಎಸ್ಐ ಸೇರಿ 51 ಸಿಬ್ಬಂದಿ ವರ್ಗಾವಣೆ ಆಗಲಿದ್ದಾರೆ. ಎಲ್ಲ ಠಾಣೆಗಳಿಂದ 10ಕ್ಕಿಂತ ಹೆಚ್ಚು ಸಿಬ್ಬಂದಿಯ ಹೆಸರು ಪಟ್ಟಿಯಲ್ಲಿದ್ದರೆ, ಗೋಕುಲ‌ ಪೊಲೀಸ್ ಠಾಣೆಯಿಂದ ಮಾತ್ರ ಇಬ್ಬರ ಹೆಸರು ಇದೆ.

ಕಮಿಷನರೇಟ್'ನ ಎಲ್ಲ ಠಾಣೆಗಳ ಇನ್'ಸ್ಪೆಕ್ಟರ್'ಗಳಿಗೆ ಕಮಿಷನರ್ ಲಾಭೂರಾಮ್ ಬುಧವಾರ ಪಟ್ಟಿ ಕಳುಹಿಸಿದ್ದು,
ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜೂನ್ 16ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಕೌನ್ಸಲಿಂಗ್'ಗೆ ಸಿಬ್ಬಂದಿಯನ್ನು ಕಳುಹಿಸುವಂತೆ ಸೂಚಿಸಿದ್ದಾರೆ.

ನಾಲ್ಕಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯ ಸಂಪೂರ್ಣ ಮಾಹಿತಿ ಮೇ 25 ರ ಒಳಗೆ ಕಮಿಷನರ್ ಕಚೇರಿಗೆ ನೀಡಬೇಕು ಎಂದು ಕಮಿಷನರ್ ಎಲ್ಲ ಠಾಣಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದರು. ಅದರನ್ವಯ ಸಲ್ಲಿಕೆಯಾದ ಸಿಬ್ಬಂದಿಯ ಮಾಹಿತಿ ಒಂದೆಡೆ ಕ್ರೋಢೀಕರಿಸಿ ವರ್ಗಾವಣೆ ಪಟ್ಟಿ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT