ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸ್ತನ ಕ್ಯಾನ್ಸರ್ ಪತ್ತೆಗೆ ಉಚಿತ ಥರ್ಮಲ್ ಪರೀಕ್ಷೆ

Last Updated 6 ಅಕ್ಟೋಬರ್ 2021, 8:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಅವ್ವ ಸೇವಾ ಟ್ರಸ್ಟ್ ಮತ್ತು ಎಚ್.ಸಿ.ಜಿ. ಎನ್.ಎಂ.ಆರ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಶಿಕ್ಷಕಕಿಯರಿಗೆ ಸ್ತನ ಕ್ಯಾನ್ಸರ್ ಕುರಿತು ಉಚಿತ ಥರ್ಮಲ್ ಪರೀಕ್ಷಾ ಶಿಬಿರವನ್ನು ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಅ. 10 ರಂದು ಬೆಳಿಗ್ಗೆ 10ರಿಂದ ಆಯೋಜಿಸಲಾಗಿದೆ' ಎಂದು ವಿಧಾನ ಪರಿಷತ್ ಸಭಾಪತಿ, ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಹೊರಟ್ಟಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಒಂದು ತಿಂಗಳ ಪರ್ಯಂತ ಥರ್ಮಲ್ ಪರೀಕ್ಷಾ ಶಿಬಿರ ನಡೆಯಲಿದ್ದು, ಶಿಕ್ಷಕಿಯರು ಅದರ ಪ್ರಯೋಜನ ಪಡೆದುಕೊಳ್ಳಬಹುದು. ಮೊದಲ ಹಂತದಲ್ಲಿ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಬಿರ ನಡೆಯಲಿದೆ. ಎರಡನೇ ಹಂತದಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗುವುದು' ಎಂದರು.

ಎಚ್.ಸಿ.ಜಿ‌ ಕ್ಯಾನ್ಸರ್ ಆಸ್ಪತ್ರೆಯ ಉತ್ತರ ಕರ್ನಾಟಕ ಸಿಇಒ ಡಾ. ಜಯಕಿಶನ್,' ಕ್ಯಾನ್ಸರ್ ಗುಣಪಡಿಸಬಹುದಾದ ರೋಗವಾಗಿದ್ದು, ಭಯ ಪಡುವ ಅಗತ್ಯವಿಲ್ಲ. ಅದರೆ, ಅದನ್ನು ಮೊದಲನೆ ಹಂತದಲ್ಲಿಯೇ ಪತ್ತೆ ಹಚ್ಚುವಲ್ಲಿ ಜಾಗೃತರಾಗಬೇಕು. ಐದಾರು ವರ್ಷಗಳ ಮೊದಲು ದೇಶದಲ್ಲಿ ಶೇ 70 ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಜಾಗೃತಿ ಹೆಚ್ಚಾಗುತ್ತಿದ್ದಂತೆ, ಅದರ ಪ್ರಮಾಣ ಶೇ 90ಕ್ಕೆ ಏರಿಕೆಯಾಗಿದೆ' ಎಂದರು.

'ಅವ್ವ ಸೇವಾ ಟ್ರಸ್ಟ್ ವತಿಯಿಂದ ನಡೆಯಲಿರುವ ಶಿಬಿರದಲ್ಲಿ, ದಿನಕ್ಕೆ 50 ಮಂದಿ ಶಿಕ್ಷಕಿಯರನ್ನು ಪರೀಕ್ಷೆಗೆ ಒಳಪಡಿಸಲಾಗುವುದು‌. ಒಬ್ಬರ ಥರ್ಮಲ್‌ ಪರೀಕ್ಷೆಗೆ ₹7 ಸಾವಿರದಿಂದ ₹10 ಸಾವಿರ ವೆಚ್ಚವಾಗಲಿದೆ. ಕ್ಯಾನ್ಸರ್ ಲಕ್ಷಣ ಇದ್ದವರಿಗೆ ಮುಂದಿನ ಚಿಕಿತ್ಸೆಗೆ ಸಲಹೆ, ಸೂಚನೆ ನೀಡಲಾಗುವುದು' ಎಂದು ಹೇಳಿದರು.

ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT