ಹುಬ್ಬಳ್ಳಿ: ಕ್ಯಾಸಲ್‌ರಾಕ್–ಕಾರಂಜೋಲ್ ನಿಲ್ದಾಣಗಳ ಮಧ್ಯೆ ಭೂಕುಸಿತ ಉಂಟಾಗಿದ್ದರಿಂದ ಈ ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು, ಇನ್ನೂ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ.
ವಾಸ್ಕೊ ಡ ಗಾಮಾದಿಂದ ಸಂಚಾರ ಆರಂಭಿಸುವ ವಾಸ್ಕೊ ಡ ಗಾಮಾ–ವೇಲಾಂಕಣಿ ಎಕ್ಸ್‌ಪ್ರೆಸ್ (17315) ರೈಲು ಸಂಚಾರವನ್ನು ಜುಲೈ 31ರಂದು ರದ್ದುಪಡಿಸಲಾಗಿದೆ.
ವೇಲಾಂಕಣಿಯಿಂದ ಹೊರಡುವ ವೇಲಾಂಕಣಿ –ವಾಸ್ಕೊ ಡ ಗಾಮಾ (17316) ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆಗಸ್ಟ್ 1ರಂದು ರದ್ದುಪಡಿಸಲಾಗಿದೆ.
ಭಾಗಶಃ ರದ್ದು: ಹಜರತ್ ನಿಜಾಮುದ್ದೀನ್‌ನಿಂದ ಜುಲೈ 29ರಿಂದ ಹೊರಡುವ ಹಜರತ್ ನಿಜಾಮುದ್ದೀನ್– ವಾಸ್ಕೊ ಡ ಗಾಮಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12780) ರೈಲು ಬೆಳಗಾವಿಯಲ್ಲಿ ಪ್ರಯಾಣ ಕೊನೆಗೊಳಿಸಲಿದೆ.
ಜುಲೈ 31 ಮತ್ತು ಆಗಸ್ಟ್ 1ರಂದು ವಾಸ್ಕೊ ಡ ಗಾಮಾ–ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು (12779) ಸಂಚಾರ ವಾಸ್ಕೊ ಡ ಗಾಮಾ–ಬೆಳಗಾವಿ ಮಧ್ಯೆ ಭಾಗಶಃ ರದ್ದಾಗಿದ್ದು, ರೈಲು ಬೆಳಗಾವಿಯಿಂದ ಸಂಚಾರ ಆರಂಭಿಸಲಿದೆ.
ಜುಲೈ 29ರಂದು ಶಾಲಿಮಾರ್‌ನಿಂದ ಹೊರಡುವ ಶಾಲಿಮಾರ್–ವಾಸ್ಕೊ ಡ ಗಾಮಾ ಎಕ್ಸ್‌ಪ್ರೆಸ್ ರೈಲು (18047) ಹುಬ್ಬಳ್ಳಿಯ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಲ್ಲಿ ಸಂಚಾರ ಕೊನೆಗಳಿಸಲಿದೆ.
ಜುಲೈ 30ರಂದು ಕಚೆಗುಡಾ–ವಾಸ್ಕೊ ಡ ಗಾಮಾ ಸ್ಲಿಪ್ ಕೋಚ್ ರೈಲು (17603/18047) ಹುಬ್ಬಳ್ಳಿಯ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದವರೆಗೆ ಸಂಚರಿಸಲಿದೆ. ಆಗಸ್ಟ್ 1ರಂದು ವಾಸ್ಕೊ ಡ ಗಾಮಾದಿಂದ ಹೊರಡಬೇಕಿದ್ದ ವಾಸ್ಕೊ ಡ ಗಾಮಾ–ಶಾಲಿಮಾರ್ ಎಕ್ಸ್‌ಪ್ರೆಸ್ (18048) ರೈಲು ಹುಬ್ಬಳ್ಳಿಯ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ಆಗಸ್ಟ್ 1ರಂದು ವಾಸ್ಕೊ ಡ ಗಾಮಾ–ಕಚೆಗುಡಾ ಸ್ಲಿಪ್ ಕೋಚ್ ರೈಲು (17604/18048) ಹುಬ್ಬಳ್ಳಿಯ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.