ಬುಧವಾರ, ಏಪ್ರಿಲ್ 8, 2020
19 °C

ದಿಂಗಾಲೇಶ್ವರ ಸ್ವಾಮೀಜಿ ಹೇಳಿದ ಎಂಗೇಜ್‌ಮೆಂಟ್‌–ಮದುವೆ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೂರುಸಾವಿರ ಮಠದಲ್ಲಿ ಫೆ.23 ದು ಸತ್ಯ‌ದರ್ಶನ ಸಭೆ ನಡೆಯಲಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಾಲೇಹೂಸೂರಿನ ದಿಂಗಾಲೇಶ್ವರ‌ ಸ್ವಾಮೀಜಿ ಹೇಳಿದರು.

ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ರುದ್ರಮುನಿ ಸ್ವಾಮಿಗಳ ನಡುವೆ ಭಿನ್ನಮತ ಬಂದಾಗ‌ ಬಗೆಹರಿಸಲು ನಾನು ಬೇಕಿತ್ತು. ಸಮಸ್ಯೆ ಬಗೆಹರಿಸಲು ಬಂದವನನ್ನು‌ ಸಮಸ್ಯೆಗೆ ದೂಡಿದ್ದಾರೆ. ನನ್ನನ್ನು ಸಮಸ್ಯೆಯಿಂದ ಮುಕ್ತಗೊಳಿಸಿ ಎಂದರು.

ಎಲ್ಲವೂ ನ್ಯಾಯಲಯದಲ್ಲೇ ಬಗೆಹರಿಯಬೇಕು ಎಂದಿಲ್ಲ. ಅಲ್ಲಿ ಬಗೆಹರಿದರೆ ಮಠದ ಗೌರವ ಕಡಿಮೆಯಾಗುತ್ತದೆ. ಸತ್ಯವನ್ನು ಸಮಾಜದ ಮುಂದಿಡಲಿ ಎಂದು ಆಗ್ರಹಿಸಿದರು.

‘ಎಂಗೇಜ್‌ಮೆಂಟ್ ಆಗಿದೆ. ಮದುವೆ ದಿನ ನಮ್ಮ ಯಜಮಾನನನ್ನು ಹೊತ್ತುಕೊಂಡು ಹೋಗಿದ್ದಾರೆ. ಅವರಿಗೆ ನನ್ನ ಮೇಲೆಯೇ ಮನಸ್ಸಿದೆ. ಅವರನ್ನು ಬಂಧನದಲ್ಲಿಟ್ಟಿದ್ದಾರೆ. ಅವರನ್ನು ಹೊರಗೆ ಬಿಟ್ಟರೆ ನನ್ನನ್ನೇ ಮದುವೆಯಾಗಲಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಇನ್ನಷ್ಟು... 

ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಗೊಂದಲ: ದಿಂಗಾಲೇಶ್ವರ ಭೇಟಿ ನಿರಾಕರಿಸಿದ ಮೂಜಗು
ಮೂರುಸಾವಿರ ಮಠ ಉತ್ತರಾಧಿಕಾರಿ ಚರ್ಚೆ ಅನಗತ್ಯ: ಮೋಹನ ಲಿಂಬಿಕಾಯಿ
ಮೂರು ಸಾವಿರ ಮಠದ ಪೀಠಕ್ಕೇರುವುದು ನಿಶ್ಚಿತ: ರುದ್ರಮುನಿ ಸ್ವಾಮೀಜಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)