ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ತಂಪೆರೆದ ಮಳೆ

Published 6 ಜನವರಿ 2024, 16:12 IST
Last Updated 6 ಜನವರಿ 2024, 16:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಾದ್ಯಂತ ಶನಿವಾರ ಸಂಜೆ ಸುಮಾರು 20 ನಿಮಿಷ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು.

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆಗೆ, ಮಳೆ ತುಸು ತಂಪನೆರೆಯಿತು. ಮಾರುಕಟ್ಟೆಗೆ ಬಂದವರು ಏಕಾಏಕಿ ಸುರಿದ ಮಳೆಯಿಂದ ಪರದಾಡಿದರು. ಬೈಕ್‌ ಸವಾರರು ನೆನೆಯುತ್ತಲೇ ಸಂಚರಿಸಿದ ದೃಶ್ಯ ಕಂಡು ಬಂದಿತು.

ರಸ್ತೆ ಕಾಮಗಾರಿ ನಡೆಯುತ್ತಿರುವ ಅಶೋಕನಗರ, ದೇಶಪಾಂಡೆನಗರ, ದೇವಾಂಗಪೇಟೆ, ಚನ್ನಪೇಟೆ, ಆನಂದನಗರ ರಸ್ತೆಯ ಅಲ್ಲಲ್ಲಿ ನೀರು ನಿಂತಿತ್ತು. ಕಾಮಗಾರಿಯಿಂದಾಗಿ ನಿಂತ ಕೊಳಚೆ ನೀರಿನಿಂದ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT