ಹುಬ್ಬಳ್ಳಿ: ಸ್ಮಾರ್ಟ್ಸಿಟಿ ಯೋಜನೆಯಡಿ ₹29.29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾದ ತೋಳನಕೆರೆ ಉದ್ಯಾನ ಮತ್ತು ಹಾಳು ಕೊಂಪೆಯಂತೆ ಇದ್ಗಿ ರಾಮಲಿಂಗೇಶ್ವರನಗರದ ಕೊಳಚೆ ಪ್ರದೇಶ ಹೊಸ ಸ್ವರೂಪ ಪಡೆದಿದೆ.

ಒಟ್ಟು 32.64 ಎಕರೆ ವಿಸ್ತಾರದ ತೋಳನಕೆರೆಯು ಗಿಡಗಂಟಿಗಳಿಂದ ಆವರಿಸಿಕೊಂಡಿತ್ತು. ಕೊಳಚೆ ನೀರಿನಿಂದ ಮಲಿನಗೊಂಡ ಕೆರೆಯ ಸುತ್ತಮುತ್ತ ಜನರು ಸುಳಿಯುತ್ತಿರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ, ಕೆರೆಗೆ ಹೊಸ ರೂಪ ಸಿಕ್ಕಿದ್ದು, ಆಕರ್ಷಕ ಸ್ಥಳವಾಗಿದೆ. ಅತ್ಯಾಕರ್ಷಕ ಉದ್ಯಾನ, ವಾಯು ವಿಹಾರಕ್ಕೆ ನಡಿಗೆ ಪಥ, ವಿವಿಧ ಜಾತಿಯ ಮರ, ತರಹೇವಾರಿ ಗಿಡಗಳು, ಹುಲ್ಲು ಹಾಸು, ಮನಮೋಹಕ ಪುಷ್ಪಗಳು ಉದ್ಯಾನಕ್ಕೆ ಮೆರಗು ತಂದಿವೆ. ಕೆರೆ ಬದಿಯ ತೋಳಗಳ ಹಿಂಡಿನ ಸಿಮೆಂಟ್ ಕಲಾಕೃತಿಗಳಾಗಿವೆ.

ರಾಮಲಿಂಗೇಶ್ವರ ನಗರ ಬಡಾವಣೆ ಎಂದರೆ, ಜನರು ಅಸಹ್ಯ ಪಡುತ್ತಿದ್ದರು. ಈ ಬಡಾವಣೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಹ ಬಳಸುತ್ತಿರಲಿಲ್ಲ. ಕೊಳಚೆ ಪ್ರದೇಶ(ಸ್ಲಮ್)ಕ್ಕೆ ಖ್ಯಾತಿಯಾಗಿದ್ದ ಈ ಬಡಾವಣೆ, ಇದೀಗ ನಗರದಲ್ಲಿಯೇ ಮಾದರಿ ಪ್ರದೇಶವಾಗಿದೆ. ಮೂಗುಮುಚ್ಚಿಕೊಂಡು ಓಡಾಡುತ್ತಿದ್ದವರು, ತಮ್ಮ ಬಡಾವಣೆಯನ್ನು ಸಹ ಅದೇ ರೀತಿ ಅಭಿವೃದ್ಧಿಪಡಿಸಿ ಎನ್ನುತ್ತಿದ್ದಾರೆ. ಮೂಲಸೌಲಭ್ಯಗಳಿಂದ ಮಾದರಿ ಕೊಳಚೆ ಪ್ರದೇಶವಾಗಿದೆ. ಇದು ಸಹ ಸ್ಮಾರ್ಟ್ ಸಿಟಿ ಯೋಜನೆಯಡಿ ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಿದೆ.

ಈ ವಾರ್ಡ್ನಲ್ಲಿ 15 ಕಾಲೊನಿಗಳಿವೆ. ಬಹುತೇಕ ಕಾಲೊನಿಗಳ ಮುಖ್ಯ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿವೆ. ಕೆಲ ಕಾಲೊನಿಗಳ ಒಳರಸ್ತೆಗಳು ಮಣ್ಣಿನ ರಸ್ತೆಗಳಾಗಿ ಉಳಿದಿವೆ. ಮಳೆಯಾದಾಗ, ಓಡಾಡಲು ಕಷ್ಟವಾಗುತ್ತದೆ. 8 ಪೈಕಿ 6 ಉದ್ಯಾನಗಳು ಅಭಿವೃದ್ಧಿಯಾಗಿವೆ. ವಾಯುವಿಹಾರಿಗಳಿಗೆ ಪ್ರತ್ಯೇಕ ಪಥ, ಜಿಮ್ ಉಪಕರಣ ಅಳವಡಿಕೆ, ವಿದ್ಯುತ್ ದೀಪ ಅಳವಡಿಕೆ, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಿ ಮಾದರಿ ಉದ್ಯಾನವನ್ನಾಗಿ ಮಾಡಲಾಗಿದೆ.

ವಿವಿಧ ವಾರ್ಡ್ಗಳಲ್ಲಿ ಸ್ಪರ್ಧಿಸಿ ನಾಲ್ಕು ಬಾರಿ ಪಾಲಿಕೆ ಸದಸ್ಯರಾದ ರಾಮಪ್ಪ ಬಡಿಗೇರ ಅವರು, ವಾರ್ಡ್ ವಿಂಗಡಣೆ ಆದಾಗ 30 ನೇ ವಾರ್ಡ್ ಆಯ್ಕೆ ಮಾಡಿಕೊಂಡು ಸದಸ್ಯರಾಗಿದ್ದರು. ಅವರು ಸದ್ಯ ಮೇಯರ್ ಆಗಿದ್ದಾರೆ.

‘ಈ ವಾರ್ಡ್ಗೆ ಏಳು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಜನರಿಗೆ ತೀವ್ರ ಸಮಸ್ಯೆ ಕಾಡುತ್ತಿದೆ. ಮೇಯರ್ ಆಗಿ ಅಧಿಕಾರ ಸ್ವೀಕರಿಸಿದಾಗ, ಒಂದು ವರ್ಷದ ಒಳಗೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ನಿರ್ಧರಿಸಿ, ಜನರಿಗೆ ಭರವಸೆ ನೀಡಿದ್ದೆ. ಆ ನಿಟ್ಟಿನಲ್ಲಿ ಪೈಪ್ಲೈನ್ ಅಳವಡಿಕೆ ಸೇರಿ ಕೆಲ ಕೆಲಸಗಳು ನಡೆದವು. ಆದರೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗದ ಮತ್ತು ತಾಂತ್ರಿಕ ಕಾರಣದಿಂದ ಅದು ಈಡೇರಲಿಲ್ಲ’ ಎಂದು ವಾರ್ಡ್ ಸದಸ್ಯ, ಮೇಯರ್ ರಾಮಪ್ಪ ಬಡಿಗೇರ ಬೇಸರ ವ್ಯಕ್ತಪಡಿಸಿದರು.

‘ಹುಬ್ಬಳ್ಳಿಯಲ್ಲೇ ಅತಿದೊಡ್ಡ ಕೊಳಚೆ ಪ್ರದೇಶ ರಾಮಲಿಂಗೇಶ್ವರ ನಗರ. ಅಲ್ಲಿ 1,500 ಮನೆಗಳಿದ್ದು, ಎರಡು–ಮೂರು ವರ್ಷಗಳ ಹಿಂದೆ ಆ ಭಾಗದಲ್ಲಿ ಜನರು ಓಡಾಡಲು ಹಿಂಜರಿಯುತ್ತಿದ್ದರು. ಮನೆ ಎದುರಿಗೇ ಕೊಳಚೆ ನೀರು ಹರಿಯುತ್ತಿತ್ತು, ಹಂದಿಗಳು ಓಡಾಡುತ್ತಿದ್ದವು. ಸೊಳ್ಳೆಗಳ ಕಾಟ ಇರುತಿತ್ತು. ಸ್ಮಾರ್ಟ್ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಕೈಗೊಂಡು, ಮಾದರಿ ಬಡಾವಣೆಯನ್ನಾಗಿ ಮಾಡಲಾಗಿದೆ. ಕಾಂಕ್ರೀಟ್ ರಸ್ತೆ, ಗಟಾರು, ಒಳಚರಂಡಿ ಸೇರಿದಂತೆ ಕುಡಿಯುವ ನೀರಿಗೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಮಾರ್ಗ ಕಲ್ಪಿಸಲಾಗಿದೆ’ ಎಂದರು.

ರಾಮಲಿಂಗೇಶ್ವರ ನಗರ ಸ್ಲಮ್ ಸಕಲ ಸೌಲಭ್ಯಗಳನ್ನು ಒಳಗೊಂಡ ಮಾದರಿ ಬಡಾವಣೆಯಾಗಿದೆ. ರಾಜಕೀಯದಲ್ಲಿ ಹುಬ್ಬಳ್ಳಿ ಬಲಾಢ್ಯವಾಗಿದ್ದರೂ ಸ್ಥಳೀಯರಿಗೆ ಉದ್ಯೋಗ ಕೊಡಿಸಲಾಗಿಲ್ಲ ಎಂಬ ಬೇಸರವಿದೆ
ರಾಮಪ್ಪ ಬಡಿಗೇರ, ಮೇಯರ್ 30ನೇ ವಾರ್ಡ್ ಸದಸ್ಯ

ಅವಳಿನಗರದ ಉಳಿದ ವಾರ್ಡ್ಗೆ ಹೋಲಿಸಿದರೆ ನಮ್ಮ ವಾರ್ಡ್ ಸಾಕಷ್ಟು ಅಭಿವೃದ್ಧಿಯಾಗಿದೆ. ಕುಡಿಯುವ ನೀರಿನ ಸಮಸ್ಯೆಯೇ ಹೆಚ್ಚಾಗಿದ್ದು ಆದಷ್ಟು ಬೇಗ 24*7 ಯೋಜನೆ ಜಾರಿಗೆ ಬರಲಿ.
ಶಿವಾನಂದ ಕಾಟಕರ, ಸ್ಥಳೀಯ ನಿವಾಸಿ

ಪ್ರಮುಖ ಬಡಾವಣೆಗಳು

ರೇಣುಕಾನಗರ ಗಾಂಧಿನಗರ ಸೆಂಟ್ರಲ್ ಎಕ್ಸೈಜ್ ಕಾಲೊನಿ ವಿವೇಕಾನಂದನಗರ ರಾಘವೇಂದ್ರನಗರ ಮಾನಸಗಿರಿ ಬಡಾವಣೆ ಸರಸ್ವತಿಪುರ ಪವನ ಕಾಲೊನಿ ರಾಮಕೃಷ್ಣ ನಗರ ದೇವಿನಗರ ನೆಹರೂನಗರ ಕುಮಾರಪಾರ್ಕ್.

ಬೇಡಿಕೆಗಳಿಗೆ ಸ್ಪಂದಿಸಿ....

ತೋಳನಕೆರೆಗೆ ಕೊಳಚೆ ನೀರು ಸೇರದಿರಲಿ ಸೊಳ್ಳೆಗಳ ಕಾಟ ನಿವಾರಣೆಗೆ ಕ್ರಮ ಕೈಗೊಳ್ಳಿ ರಸ್ತೆಗಳನ್ನು ದುರಸ್ತಿಗೊಳಿಸಿ ಸೌಲಭ್ಯ ಕಲ್ಪಿಸಿ ಒಳಚರಂಡಿ ಗಟಾರಗಳ ವ್ಯವಸ್ಥೆ ಮಾಡಿ ಇನ್ನೂ ಎರಡು ಅಂಗನವಾಡಿ ಕೇಂದ್ರಗಳು ಬೇಕು ನಿರಂತರ ಕುಡಿಯುವ ಸೌಲಭ್ಯ ಕಲ್ಪಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.