ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳಿಗೆ ‘ಅಸ್ಮಿತ್‌’ ಅನುಷ್ಠಾನ

Last Updated 18 ಮಾರ್ಚ್ 2022, 2:39 IST
ಅಕ್ಷರ ಗಾತ್ರ

ಅಳ್ನಾವರ: ಧಾರವಾಡದ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್, ಪುಣೆಯ ರೋಟರಿ ಕ್ಲಬ್ ಬಾಳೆವಾಡಿ, ಜಿಟಿಪಿಎಲ್ ಹ್ಯಾಟವೇ ಲಿಮಿಟೆಡ್ ಆಶ್ರಯದಲ್ಲಿ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ‘ಅಸ್ಮಿತ್‌’ ಎಂಬ ವಿನೂತನ ಯೋಜನೆ ಆರಂಭಿಸಲಾಯಿತು.

ಇಲ್ಲಿನ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಗುರುವಾರ ಕೆವಿಜಿ ಬ್ಯಾಂಕ್ ಹಾಗೂ ಸ್ವಾಮಿವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕ ಬಿ.ಸಿ. ರವಿಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಅಧುನಿಕ ಶಿಕ್ಷಣದ ಅವಶ್ಯಕತೆ ಕುರಿತು ತಿಳಿದುಕೊಳ್ಳಲು ಟ್ಯಾಬ್ ಹಾಗೂ ಉತ್ತಮ ಆರೋಗ್ಯಕ್ಕಾಗಿ ಮಲ್ಟಿ ವಿಟಾಮಿನ್ ಮಾತ್ರೆ, ಹೆಣ್ಣುಮಕ್ಕಳ ಶುಚಿತ್ವಕ್ಕಾಗಿ ಸಾನಿಟರಿ ಪ್ಯಾಡ್ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ರೋಟರಿ ಸೆವೆನ್ ಹಿಲ್ಸ್ ಸಂಸ್ಥೆಯ ಅಧ್ಯಕ್ಷೆ ಡಾ. ಪಲ್ಲವಿ ದೇಶಪಾಂಡೆ ಮಾತನಾಡಿ ‘ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಋತುಚಕ್ರದ ಸಮಯದಲ್ಲಿ ಕಾಪಾಡಬಹುದಾದ ನೈರ್ಮಲ್ಯದ ಅರಿವು ಮೂಡಿಸಲಾಗುತ್ತಿದೆ’ ಎಂದರು.

ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿಯ ಶರದ ಪೈ, ಸ್ವಾಮಿ ವಿವೇಕಾನಂದ ಯೂತ್‌ ಮೂವಮೆಂಟ್‌ನ ಉತ್ತರ ಕರ್ನಾಟಕದದ ಸಂಯೋಜಕ ಕೆ.ಎಸ್.ಜಯಂತ, ಕೆವಿಜಿ ಬ್ಯಾಂಕ್‌ನ ಅಧಿಕಾರಿ ಉಲ್ಲಾಸ ಗುನಗಾ, ಗೌರಿ ಮದಲಬಾವಿ, ಡಾ. ರೇಣುಕಾ, ತಾರಾದೇವಿ ವಾಲಿ, ಮುಖ್ಯ ಶಿಕ್ಷಕಿ ದೀಪಾ ಲಾಡ್, ಶಿಕ್ಷಕಿ ಮೀನಾಕ್ಷಿ ಹಿರೇಮಠ, ಪಾರ್ವತಿ ದೊಡ್ಡವಾಡ ಇದ್ದರು. ಅಸ್ಮಿತಾ ಪುಸ್ತಕಗಳನ್ನು ವಿತರಿಸಲಾಯಿತು. ಡಾ. ಕೋಮಲ್ ಕುಲಕರ್ಣಿ ಹೆಣ್ಣು ಮಕ್ಕಳ ಶುಚಿತ್ವದ ಬಗ್ಗೆ ತಿಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT