ಭಾನುವಾರ, 21 ಡಿಸೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ವಿಚಿತ್ರ ನಡವಳಿಕೆ, ಮೈತುಂಬೆಲ್ಲ ಟ್ಯಾಟೂ: ಇವರು ರೌಡಿಗಳಷ್ಟೇ ಅಲ್ಲ..

Published : 21 ಡಿಸೆಂಬರ್ 2025, 5:01 IST
Last Updated : 21 ಡಿಸೆಂಬರ್ 2025, 5:01 IST
ಫಾಲೋ ಮಾಡಿ
Comments
ಹುಬ್ಬಳ್ಳಿ–ಧಾರವಾಡ ಮಹಾನಗರದ ರೌಡಿಗಳ ಮೇಲೆ ನಿಗಾ ಇರಿಸಿದ್ದೇವೆ. ಅವರ ಕುರಿತು ಮಾಹಿತಿ ಸಂಗ್ರಹಿಸುತ್ತೇವೆ. ಅನುಮಾನಾಸ್ಪದ ವಿಷಯಗಳಿಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ.
ಎನ್.ಶಶಿಕುಮಾರ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ–ಧಾರವಾಡ
ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಗಾಗ ರೌಡಿ ಪರೇಡ್‌ ಮಾಡಿ ಎಚ್ಚರಿಕೆ ನೀಡಲಾಗುತ್ತದೆ. ಅವರ ಮನೆ ಮೇಲೆ ದಿಢೀರ್‌ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತದೆ
–ಮಹಾನಿಂಗ ನಂದಗಾವಿ ಡಿಸಿಪಿ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ
ರೌಡಿಗಳೇ ಪೊಲೀಸರಿಗೆ ಬಾತ್ಮಿದಾರರು!
‘ತಲ್ವಾರ್‌ನಲ್ಲಿ ಕೇಕ್ ಕತ್ತರಿಸುವ ತಲ್ವಾರ್ ಝಳಪಿಸುತ್ತ ಜನರನ್ನು ಬೆದರಿಸುವ ಬಡವರನ್ನು ಹೆಸರಿಸಿ ಜಮೀನನ್ನು ಹೆಸರಿಗೆ ಮಾಡಿಕೊಳ್ಳುವ ಬಡ್ಡಿ ವ್ಯವಹಾರ ನಡೆಸುವ ಬೀದಿ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುವ ರೌಡಿಗಳು ಅವಳಿನಗರದಲ್ಲಿ ಸಾಮಾನ್ಯ. ಪೊಲೀಸರ ಜೊತೆಯೂ ನಂಟು ಬೆಸೆದುಕೊಂಡಿರುತ್ತಾರೆ. ಹಾಗೆಯೇ ರಾಜಕಾಕರಣಿಗಳ ಸುತ್ತ ಸುತ್ತವ ರೌಡಿಗಳ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡ ರೌಡಿಗಳು ಇದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಸಿಬ್ಬಂದಿ ಹೇಳುತ್ತಾರೆ. ‘ಹಗಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರಂತೆ ಕಾಣುವ ಇವರು ಕತ್ತಲಾದಂತೆ ತಮ್ಮ ಅಡ್ಡಾಗಳಲ್ಲಿ ಸಕ್ರಿಯರಾಗುತ್ತಾರೆ. ನಗರದಲ್ಲಿ ನಡೆಯುವ ಬಹುತೇಕ ಎಲ್ಲ ಕಾನೂನು ಬಾಹಿರ ವ್ಯವಹಾರಗಳು ಇವರಿಗೆ ಗೊತ್ತು. ಪಿಕ್‌ ಪಾಕೆಟ್‌ನಿಂದ ಹಿಡಿದು ಕೊಲೆ ಕೃತ್ಯದವರೆಗೂ ಇವರಿಗೆ ಮಾಹಿತಿಯಿರುತ್ತದೆ. ಸಣ್ಣಪುಟ್ಟ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಇವರೇ ಪ್ರಮುಖ ಬಾತ್ಮಿದಾರರು ಎನ್ನುವುದು ಅಷ್ಟೇ ಸತ್ಯ. ಅಷ್ಟೊಂದು ದೊಡ್ಡ ಸಂಪರ್ಕ ಜಾಲ ರೌಡಿಗಳದ್ದಾಗಿದೆ’ ಎಂದು ವಿವರಿಸಿದರು.
ಹಗ್ಗದಂಥ ಚೈನ್‌, ಮೈಯೆಲ್ಲ ಟ್ಯಾಟೂ!
ಹೆಸರು ವಿಚಿತ್ರವಾಗಿರುವಂತೆ, ಅವರ ವೇಷಭೂಷಣವೂ ಚಿತ್ರ–ವಿಚಿತ್ರವಾಗಿವೆ. ಕೆಲವು ರೌಡಿಗಳು ಉದ್ದುದ್ದ ಕೂದಲು ಬಿಡುವುದು, ಕೂದಲನ್ನು ಗಂಟುಕಟ್ಟಿ ಹೇರ್‌ಬ್ಯಾಂಡ್‌ ಹಾಕುವುದು, ತಲ್ವಾರ್, ಬೆಂಕಿ ಚಿತ್ರವಿರುವ ಅಥವಾ ಸ್ಟಾರ್‌ ನಟರ ಭಾವಚಿತ್ರದ ಬಟ್ಟೆ ಧರಿಸುವುದು, ಶರ್ಟ್‌ ಬಟನ್‌ ತೆಗೆದು ಹಗ್ಗದಂಥ ಚಿನ್ನದ ಸರ ಪ್ರದರ್ಶಿಸುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ತಲೆ ಬೋಳಿಸಿಕೊಂಡು ಹಣೆಗೆ ಉದ್ದದ ನಾಮ ಇಟ್ಟುಕೊಂಡಿರುತ್ತಾರೆ. ಕೈ–ಕಾಲು ಕಾಣದ ಹಾಗೆ, ಶರ್ಟ್‌ ತೆಗೆದರೂ ದೇಹ ಕಾಣದಂತೆ ಟ್ಯಾಟೂ(ಹಚ್ಚೆ) ಹಾಕಿಕೊಂಡಿರುತ್ತಾರೆ. ಕೊಲೆ ಮಾಡಿ ರಕ್ತ ಅಂಟಿದ ರೌಡಿಗಳ ಕೈಗಳಲ್ಲಿಯೂ ರಾಮ, ಯೇಸು, ಅಲ್ಲಾ, ಸ್ವಸ್ತಿಕ್, ಓಂ ಟ್ಯಾಟೂ ಕಂಡು ಬರುತ್ತವೆ. ಚಾಕು, ತಲ್ವಾರ್ ಹಿಡಿದು ಹಲ್ಲೆ ನಡೆಸಿದವರ ಎದೆ ಮೇಲೂ ಹನುಮಂತ, ಶಿವ, ಗಾಂಧಿ, ಅಂಬೇಡ್ಕರ್ ಅವರ ಟ್ಯಾಟೂಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT