ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆಗೆ ಒತ್ತಾಯ

ಸರ್ಕಾರಕ್ಕೆ ಅಮೆಜಾನ್‌ ಪಾವತಿಸಿದ ಕಾನೂನು ಶುಲ್ಕ ವಿಚಾರ
Last Updated 5 ಅಕ್ಟೋಬರ್ 2021, 10:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೂರು ವರ್ಷಗಳ ಅವಧಿಯಲ್ಲಿ ಅಮೆಜಾನ್‌ ಕಂಪನಿ ಕಾನೂನು ಮತ್ತು ವೃತ್ತಿಪರ ಸೇವಾ ಶುಲ್ಕದ ಹೆಸರಿನಲ್ಲಿ ಸರ್ಕಾರಕ್ಕೆ ಪಾವತಿಸಿದ ₹ 8,546 ಕೋಟಿ ಮೊತ್ತದ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ನ ಸಂಸದೆ ಅಮೀ ಯಾಗ್ನಿಕ್ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಮೆರಿಕ ಮೂಲಕ ಅಮೆಜಾನ್‌ ಸಂಸ್ಥೆಯಿಂದಾಗಿ ಭಾರತದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹಾಗೂ ಕೈಗಾರಿಕೋದ್ಯಮಿಗಳು ನೆಲಕಚ್ಚಿದ್ದಾರೆ. ಲಕ್ಷಾಂತರ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳಿಗಷ್ಟೇ ರತ್ನಗಂಬಳಿ ಹಾಸಿ ಸಣ್ಣ ಉದ್ಯಮಿಗಳ ಬದುಕಿಗೆ ಕಂಟಕವಾಗುತ್ತಿದೆ’ ಎಂದು ದೂರಿದರು.

‘ಅಮೆಜಾನ್‌ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಆ ಸಂಸ್ಥೆಯ ಲಾಬಿಗೆ ಮಣಿದು ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದೆ. ಆತ್ಮನಿರ್ಭರ ಹಾಗೂ ಮೇಕ್‌ ಇನ್‌ ಇಂಡಿಯಾ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಸಣ್ಣ ಉದ್ಯಮಿಗಳಿಗೆ ಯಾವುದೇ ನೆರವು ಕೊಡುತ್ತಿಲ್ಲ. ವಿರೋಧ ಪಕ್ಷಗಳು ಈ ಕುರಿತು ಪ್ರಶ್ನಿಸಿದರೆ ಮೋದಿ ಮೌನಕ್ಕೆ ಜಾರುತ್ತಾರೆ. ಎಲ್ಲದಕ್ಕೂ ಮೌನ ಉತ್ತರವೇ’ ಎಂದು ಅವರು ಪ್ರಶ್ನಿಸಿದರು.

‘ಅಮೆಜಾನ್‌ ನೀಡಿದ ದೊಡ್ಡ ಮೊತ್ತವನ್ನು ಯಾವ ರಾಜಕಾರಣಿ, ಯಾವ ಹಿರಿಯ ಅಧಿಕಾರಿ ಸ್ವೀಕರಿಸಿದ್ದಾರೆ ಎನ್ನುವುದನ್ನು ಮೋದಿ ಬಹಿರಂಗಪಡಿಸಬೇಕು. ಕೇಂದ್ರ ಸರ್ಕಾರ ಹಾಗೂ ಈ ಕಾಮರ್ಸ್‌ ಸಂಸ್ಥೆಗಳ ನಡುವೆ ಇರುವ ಸಂಬಂಧವೇನು ಎನ್ನುವುದು ಜನರ ಮುಂದಿಡಬೇಕು, ರಾಷ್ಟ್ರೀಯ ಭದ್ರತೆಯ ನಿಯಮವನ್ನೂ ಉಲ್ಲಂಘಿಸಿ ಅಮೆಜಾನ್‌ನಿಂದ ಹಣ ಸ್ವೀಕರಿಸಿದ್ದು ಸರಿಯೇ?’ ಎಂದು ಅವರು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಮುಖಂಡರಾದ ಸ್ವಾತಿ ಮಳಗಿ, ರಜತ್‌ ಉಳ್ಳಾಗಡ್ಡಿಮಠ, ಜಿ.ಎ. ದೊಡ್ಡಮನಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT