ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಮಾದರಿ ಕೃಷಿ, ಸಾಮೂಹಿಕ ಕೃಷಿಯತ್ತ ರೈತರ ಮನವೊಲಿಸಬೇಕು: ಶಿವಶಂಕರ ರೆಡ್ಡಿ

Last Updated 23 ಸೆಪ್ಟೆಂಬರ್ 2018, 8:16 IST
ಅಕ್ಷರ ಗಾತ್ರ

ಧಾರವಾಡ: ‘ಇಸ್ರೇಲ್ ಮಾದರಿ ಕೃಷಿ,ಸಾಮೂಹಿಕ ಕೃಷಿಯತ್ತ ರೈತರ ಮನವೊಲಿಸಬೇಕಾಗಿದೆ’ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ಧಾರವಾಡದಲ್ಲಿ ಆರಂಭವಾದಕೃಷಿ ಮೇಳವನ್ನು ಅಧಿಕೃತವಾಗಿ ಉದ್ಘಾಟಿಸಿದ ಕೃಷಿ ಸಚಿವ ಶಿವ ಶಂಕರರೆಡ್ಡಿ,‘ಇಸ್ರೇಲ್ ಮಾದರಿ ಅಳವಡಿಸಿಕೊಳ್ಳಲು ನಿಟಿನ ಸದ್ಬಳಕೆ ಮೊದಲು ನಾವು ಅರಿಯಬೇಕು. ಇದರಿಂದ ಉತ್ಪಾದನಾ ವೆಚ್ಚ ತಗ್ಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ತಗ್ಗಲಿದೆ. ಇಸ್ರೇಲ್ ನಲ್ಲಿ ಸಣ್ಣ ಹಿಡುವಳಿದಾರರು ಸೇರಿ ಸಂಘ ನಿರ್ಮಿಸಿಕೊಂಡಿದ್ದಾರೆ. 2ರಿಂದ 5ಸಾವಿರ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದರಿಂದ ಅವರು ಯಶಸ್ವಿ ಆಗಿದ್ದಾರೆ’ಎಂದರು.

‘ಹೆಸರು ಖರೀದಿಗೆ ಕೇಂದ್ರ ಮುಂದಾಗಿದೆ. ಆದರೆ ರಾಜ್ಯ ಶಿಫಾರಸುಮಾಡಿದ ಗರಿಷ್ಠ 10 ಕ್ವಿಂಟಾಲ್ ಖರೀದಿಯ ಶಿಫಾರಸು ನಿರಾಕರಿಸಿ 4 ಕ್ವಿಂಟಲ್‌ಗೆಸೀಮಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮರು ಪ್ರಸ್ತಾವನೆ ಕಳುಹಿಸಲು ನಿರ್ಧಾರ ಮಾಡಿದ್ದೇವೆ’ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT