ಗುರುವಾರ , ಸೆಪ್ಟೆಂಬರ್ 19, 2019
22 °C

ಐಟಿಐ ವಿದ್ಯಾರ್ಥಿಗಳ ಪಕ್ಷಿ ಪ್ರೀತಿ

Published:
Updated:
Prajavani

ಧಾರವಾಡ: ಬಿಸಿಲಿನ ಬೇಗೆಯಿಂದ ಕುಡಿಯುವ ನೀರಿಗೆ ಪರದಾಡುವ ಪಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜೆಎಸ್‌ಎಸ್‌ ಮಂಜುನಾಥೇಶ್ವರ ಐಟಿಐ ಕಾಲೇಜು ವಿದ್ಯಾರ್ಥಿಗಳು ‘ಬರ್ಡ್‌ ಸ್ಟ್ಯಾಂಡ್‌’ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಪಕ್ಷಿಗಳು ಮನೆಯ ಸುತ್ತಮುತ್ತ ಆಹಾರ ಮತ್ತು ನೀರು ಅರಸಿ ಹಾರಾಡುತ್ತಿರುತ್ತವೆ. ಹನಿ ನೀರಿಗಾಗಿ ಪರಿತಪಿಸುತ್ತಿರುತ್ತವೆ. ಇಂಥವುಗಳಿಗೆ ನೀರು ಮತ್ತು ಆಹಾರ ನೀಡಲು ಆಸಕ್ತಿ ಹೊಂದಿರುವ ಹಲವರಿಗೆ ನೆರವಾಗುವ ದೃಷ್ಟಿಯಿಂದ ವಿದ್ಯಾರ್ಥಿಗಳು ಈ ಸಾಧನೆ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ನೀರು, ಕಾಳುಗಳನ್ನು ಹಾಕಿ ಮನೆಯ ಮುಂಭಾಗ, ಹಿತ್ತಲು, ಉದ್ಯಾನ ಹೀಗೆ ಪಕ್ಷಿಗಳು ಬಂದು ಹೋಗಲು ಅನುಕೂಲವಾಗುವಂತ ಸ್ಥಳದಲ್ಲಿ ಇಡಬಹುದಾಗಿದೆ.

ಅಳಿದುಳಿದ ಕಬ್ಬಿಣದ ಸರಳುಗಳಿಂದ ನಿರ್ಮಿಸಲಾದ ಈ ಸ್ಟ್ಯಾಂಡ್‌ನಲ್ಲಿ 3 ಮಣ್ಣಿನ ಪಾತ್ರಗಳನ್ನು ಇಡಲಾಗಿದೆ. ಇದು ಪುಟ್ಟ ಗಿಡದಂತೆಯೇ ಕಾಣಲಿದೆ. ಹಕ್ಕಿಗಳಿಗೆ ಬಂದು, ಕೂತು ಕಾಳುತಿಂದು, ನೀರು ಕುಡಿಯಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಇದಕ್ಕೆ ತಗುಲಿದ ವೆಚ್ಚ ₹500. ಐಟಿಐ ವಿಭಾಗದ ಉಪನ್ಯಾಸಕರಾದ ಮಹೇಶ ಕುಂದರಪೀಠ, ವಿನಾಯಕ ಗವಳಿ, ಮಹೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ.

Post Comments (+)