ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲ್‌ ಮಹಾರಾಜರ ಜಯಂತಿ

Last Updated 17 ಫೆಬ್ರುವರಿ 2022, 3:51 IST
ಅಕ್ಷರ ಗಾತ್ರ

ಕಲಘಟಗಿ: ಪಟ್ಟಣದ ಹಳಿಯಾಳ ರಸ್ತೆ ಪಕ್ಕದಲ್ಲಿ ಸೇವಾಲಾಲ್ ಮಹಾರಾಜರ 283ನೇ ಜಯಂತಿ ಅಂಗವಾಗಿ ನಡೆದ ಭೋಗ ಪೂಜಾ
ಕಾರ್ಯಕ್ರಮಕ್ಕೆ ಅಖಿಲ ಭಾರತ ಬಂಜಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ’ದೇಶದಲ್ಲಿ ಬಂಜಾರ ಸಮಾಜ ತ್ಯಾಗ, ಬಲಿದಾನಕ್ಕೆ ಹೆಸರಾಗಿದೆ.ಇತಿಹಾಸ ಕಾಲದಿಂದಲೂ ಸಮಾಜಕ್ಕೆ ಕೂಡುಗೆ ನೀಡುತ್ತಾ ಬಂದಿದೆ. ಇಂದಿನ ದಿನಮಾನದಲ್ಲಿ ಸಮಾನತೆ ಬಹಳ ಮುಖ್ಯವಾಗಿದ್ದು ಸಮಾಜ ಬಾಂಧವರು ದೇಶದ ಪ್ರಗತಿಗೆ ಶ್ರಮಿಸಬೇಕು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಮಂಗಲಪ್ಪ ಲಮಾಣಿ ನಮ್ಮ ಸಮಾಜದವರು ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಂಘಟಿತರಾಗಬೇಕಾಗಿದೆ ಎಂದರು.

ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವಾಸು ಲಮಾಣಿ, ಡಾ.ಬಿ.ಪಿ ಪೂಜಾರ, ಸಿಪಿಐ ಪ್ರಭುಸೂರಿನ ಅವರನ್ನು ಸಮಾಜದ ಬಾಂಧವರು ಸನ್ಮಾನಿಸಿದರು.

ಶಿವಪ್ಪ ಲಮಾಣಿ, ಗಣೇಶ ಲಮಾಣಿ, ಲಕ್ಷ್ಮಣ್ಣ ಲಮಾಣಿ, ಮಂಜು ಲಮಾಣಿ,ರಾಮು ಲಮಾಣಿ,ಮಂಜು ಲಮಾಣಿ, ಕೃಷ್ಣ ರಾಠೋಡ, ರತ್ನಪ್ಪ ಲಮಾಣಿ ರಾಮಚಂದ್ರ ಕಾರಬಾರಿ, ಮೌನೇಶ ಲಮಾಣಿ, ಸಂಜಯ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT