ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಜೆಡಿಎಸ್‌ ಮೈತ್ರಿ: ಸೀಟು ಹಂಚಿಕೆ ಬಗ್ಗೆ ತೀರ್ಮಾನಿಸಿಲ್ಲ– ಪ್ರಲ್ಹಾದ ಜೋಶಿ

Published 23 ಸೆಪ್ಟೆಂಬರ್ 2023, 16:29 IST
Last Updated 23 ಸೆಪ್ಟೆಂಬರ್ 2023, 16:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್‌ ಸೇರಿದ್ದು ಸಂತೋಷದ ಸಂಗತಿ. ಈವರೆಗೆ ಸೀಟು ಹಂಚಿಕೆ ತೀರ್ಮಾನಿಸಿಲ್ಲ. ಸೀಟುಗಳ ಹಂಚಿಕೆ ಬಗ್ಗೆ ರಾಜ್ಯಮಟ್ಟದ ನಾಯಕರು ತೀರ್ಮಾನಿಸುವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘1996ರಲ್ಲಿ ರಚನೆಗೊಂಡ ಎನ್‌ಡಿಎ ಮೈತ್ರಿಕೂಟದಲ್ಲಿ ಹಲವು ಪಕ್ಷಗಳು ನಮ್ಮೊಂದಿಗೆ ಸೇರಿವೆ. ಈಗ ಜೆಡಿಎಸ್‌ ಕೂಡ ಸೇರಿಕೊಂಡಿದೆ. ಮೈತ್ರಿಕೂಟ ರಚನೆಯಾದಾಗಿನಿಂದಲೂ ಅಧಿಕಾರದಲ್ಲಿ ಇರಲಿ, ಬಿಡಲಿ ಹೆಸರು ಬದಲಾವಣೆ ಮಾಡಿಲ್ಲ. ಆದರೆ, ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟವು ಭ್ರಷ್ಟಚಾರ, ಸ್ವಜನಪಕ್ಷಪಾತ ಆರೋಪಕ್ಕೆ ಸಿಲುಕಿ ಹೆಸರು ಬದಲಿಸಿಕೊಂಡಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಗೂಬೆ ಕೂರಿಸುವ ಯತ್ನ

ಕಾವೇರಿ ಜಲನ್ಯಾಯ ಮಂಡಳಿಯು ಅರೆನ್ಯಾಯಿಕ ವ್ಯವಸ್ಥೆಯನ್ನು ಒಳಗೊಂಡಿದ್ದು, ಇದರಲ್ಲಿ ಕೇಂದ್ರ ಸರ್ಕಾರಕ್ಕೆ ಮಧ್ಯೆಪ್ರವೇಶಿಸಲು ಬರುವುದಿಲ್ಲ. ಇದು ಎಲ್ಲರಿಗೂ ಗೊತ್ತಿದೆ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

ಸುಪ್ರೀಂ ಕೋರ್ಟ್‌ಗೆ ಹೋಗುವ ಮೊದಲು ತಮಿಳುನಾಡಿನ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ, ನೀರು ಹರಿಸಲು ಕಾಲಾವಕಾಶ ಕೋರಬೇಕಿತ್ತು ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಅವರ ತರಹ ಮೋದಿ ಅವರನ್ನ ಬೈಯೋದೆ ಡಿಎಂಕೆ ಅವರ ಕೆಲಸ‌. ನಾವು ಕರೆದರೆ ಯಾಕೆ ಅವರು ಬರ್ತಾರೆ. ಜನರನ್ಮು ತಪ್ಪು ದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು. ಮೈತ್ರಿಕೂಟದ ಭಾಗಿಯಾಗಿರುವ ಡಿಎಂಕೆ ಅವರನ್ನು ಕರೆದು ಮಲ್ಲಿಕಾರ್ಜುನ ಖರ್ಗೆ ಅವರು ಏಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT