ಹುಬ್ಬಳ್ಳಿ: ಜೋಗ ಜಲಪಾತ ವೀಕ್ಷಣೆಗೆ ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ಜೋಗ ಜಲಪಾತ ವೀಕ್ಷಿಸಲು ಅನುಕೂಲವಾಗುವಂತೆ 2ನೇ ಮತ್ತು 4ನೇ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹೋಗಿ ಬರಲು ಈ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಮಾರ್ಗಮಧ್ಯ ಶಿರಸಿ ಮಾರಿಕಾಂಬ ದೇವಸ್ಥಾನದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗದಲ್ಲಿ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಮಯಾವಕಾಶ ನೀಡಲಾಗುತ್ತದೆ.

ಮಲ್ಟಿ ಅಕ್ಸೆಲ್ ವೋಲ್ವೋ ಎಸಿ, ರಾಜಹಂಸ ಹಾಗೂ ವೇಗದೂತ ಮಾದರಿಯ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವೋಲ್ವೊ ಎಸಿ ಬಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 8ಕ್ಕೆ ಹೊರಡುತ್ತದೆ. ಮಧ್ಯಾಹ್ನ12.30ಕ್ಕೆ ಜೋಗ ತಲುಪುತ್ತದೆ. ಜೋಗದಿಂದ ಸಂಜೆ 5ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 9ಕ್ಕೆ ಬರುತ್ತದೆ. ಪ್ರಯಾಣ ದರ ₹700 ನಿಗದಿಪಡಿಸಲಾಗಿದೆ.

ರಾಜಹಂಸ ಬಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 7.30ಕ್ಕೆ ಹೊರಡುತ್ತದೆ. ಮಧ್ಯಾಹ್ನ12.30ಕ್ಕೆ ಜೋಗ ಜಲಪಾತ ತಲುತ್ತದೆ. ಜೋಗದಿಂದ ಸಂಜೆ 4.30ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 9ಕ್ಕೆ ಬರುತ್ತದೆ. ಪ್ರಯಾಣ ದರ ₹ 600 ನಿಗದಿಪಡಿಸಲಾಗಿದೆ.

ವೇಗದೂತ ಬಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 7.30ಕ್ಕೆ ಹೊರಡುತ್ತದೆ.12.30ಕ್ಕೆ ಜೋಗ ಜಲಪಾತ ತಲುತ್ತದೆ. ಜೋಗದಿಂದ ಸಂಜೆ 4.30ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 9ಕ್ಕೆ ಬರುತ್ತದೆ. ಪ್ರಯಾಣ ದರ ₹500 ನಿಗದಿಪಡಿಸಲಾಗಿದೆ. ಮುಂಗಡ ಬುಕ್ಕಿಂಗ್ ಸೌಲಭ್ಯವೂ ಇದೆ.

ಒಪ್ಪಂದ ಸೌಲಭ್ಯ: ಸರ್ಕಾರಿ, ಖಾಸಗಿ ನೌಕರರು, ಸಂಘ– ಸಂಸ್ಥೆಗಳು ಹಾಗೂ ಕುಟುಂಬದರೊಂದಿಗೆ ಒಟ್ಟಾಗಿ ಪ್ರವಾಸ ಮಾಡಲು ಬಯಸಿದ್ದಲ್ಲಿ ತಾವು ಬಯಸಿದ ದಿನದಂದು ವಿಶೇಷ ಬಸ್ ವ್ಯವಸ್ಥೆ ಸಹ ಮಾಡಲಾಗುತ್ತದೆ. ವೋಲ್ವೋ ಎಸಿ ಬಸ್ ಹಾಗೂ ವೇಗದೂತ ಬಸ್ಸಿಗೆ ಕನಿಷ್ಠ 45 ಹಾಗೂ ರಾಜಹಂಸ ಬಸ್ಸಿಗೆ ಕನಿಷ್ಠ 35 ಜನ ಪ್ರವಾಸಿಗರು ಇರಬೇಕು. ಮಾಹಿತಿಗೆ ಮೊ: 7760991674 / 7760991682 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.