ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿಚಕ್ರ ವಾಹನ ಕಳವು; ಆರೋಪಿ ಬಂಧನ

Published 17 ಜೂನ್ 2024, 15:55 IST
Last Updated 17 ಜೂನ್ 2024, 15:55 IST
ಅಕ್ಷರ ಗಾತ್ರ

ಕಲಘಟಗಿ: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಕಲಘಟಗಿ ಪೊಲೀಸರು, ಆರೋಪಿಯಿಂದ 4 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಧಾರವಾಡ ತಾಲ್ಲೂಕಿನ ಬೋಗೂರ ಗ್ರಾಮದ ಧರ್ಮರಾಜ ಗಂಗಪ್ಪ ಹರಿಜನ ಬಂಧಿತ ಆರೋಪಿ. 

ಜೂನ್ 28 ರಂದು ಕಲಘಟಗಿ ಪಟ್ಟಣದ ಸತ್ಯಮೂರ್ತಿ ಜೋಶಿ ಎಂಬುವರು ತಾಲ್ಲೂಕಿನ ಮಾಚಾಪುರ ಗ್ರಾಮದ ಹತ್ತಿರದ ಶ್ರೀಕೃಷ್ಣ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ₹45 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಕಳವು ಮಾಡಲಾಗಿತ್ತು. ಈ ಬಗ್ಗೆ ಸತ್ಯಮೂರ್ತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.  

ಸಿಪಿಐ ಶ್ರೀಶೈಲ್ ಕೌಜಲಗಿ, ಅಪರಾಧ ವಿಭಾಗದ ಪಿಎಸ್‌ಐ ಸಿ.ಎನ್.ಕರವೀರಪ್ಪನವರ, ಬಸವರಾಜ ಯದ್ದಲಗುಡ್ಡ ಸಿಬ್ಬಂದಿ ಮಾತೇಶ್, ಶ್ರೀಧರ ಗುಗ್ಗರಿ, ಗೋಪಾಲ ಪಿರಗಿ, ಮಲ್ಲಿಕಾರ್ಜುನ, ಪ್ರಭುದೇವ ಎನ್, ವಿನಾಯಕ, ಹುಸೇನ ಯಲಿಗಾರ, ಮಾದೇವ ಹೊಸಮನಿ ತನಿಖಾ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT