ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ 9 ದಿನ ನಡೆಯುವ ಗ್ರಾಮದೇವಿಯರ ಜಾತ್ರೆಗೆ ಭಾನುವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಗ್ರಾಮದ ಹೊಸ ಬಸ್ ನಿಲ್ದಾಣ ಪಕ್ಕದ ಚೌತಮನೆ ಕಟ್ಟೆಯಲ್ಲಿ, ದೇವಿಯರನ್ನು ಕಿಲೆ ಓಣಿ ಗ್ರಾಮದೇವಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು.

ಮೆರವಗೆಣಿಯಲ್ಲಿ ಭಂಡಾರ (ಹೋನ್ನಾಟ) ಸಹಿತ ಡೊಳ್ಳು ಕುಣಿತ, ಕರಡಿ ಮಜಲು, ಜಗ್ಗಲಗಿ, ಜಾಂಜು, ಮಕ್ಕಳು ಹಾಗೂ ಮಹಿಳೆಯರಿಂದ ಕೋಲಾಟ ಮೆರಗು ನೀಡಿದವು.

ಭಕ್ತರಿಂದ ಉದೋ ಉದೋ.... ಮಂಗಳ ಘೋಷ ಮೆರವಣಿಗೆಯ ಉದ್ದಕ್ಕೂ ಹರ್ಷ ತಂದಿತು. ಐದು ವರ್ಷಕೊಮ್ಮೆ ಜರುಗುವ ಜಾತ್ರೆಗೆ ಹಿಂದಿನ ಪದ್ಧತಿಯಂತೆ ದೇವಿಯರಿಗೆ ಭಕ್ತಿಯಿಂದ ಸೇವೆ ಸಲ್ಲಿಸಿದರು.

ಕಿಲೆ ಓಣಿ, ಸುಣಗಾರ ಓಣಿ, ನದಾಫ್ ಓಣಿ, ಪೋಲಿಸ್ ಚೌಕ್, ಹಳೇ ಬಸ್ ನಿಲ್ದಾಣ, ಪ್ಯಾಟಿ ಬಸವೇಶ್ವರ ದೇವಸ್ಥಾನ ಎದುರಿನಿಂದ, ಮಧ್ಯಾಹ್ನ ಓಣಿ, ಚಲವಾದಿ ಓಣಿ ಹಾಗೂ ಜಾಡಗೇರಿ ಓಣಿಯ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಮಹಿಳೆಯರು ಮನೆ ಎದುರಿನಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಪಲ್ಲಕ್ಕಿ ಹೊತ್ತವರ ಕಾಲಿಗೆ ನೀರು ಹಾಕಿ ನಮಸ್ಕರಿಸಿದರು.

ಗ್ರಾಮದೇವಿಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಿಶ್ರಿಕೋಟಿ ಹಾಗೂ ಚವರಗುಡ್ಡ ಗುರು ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು ದೇವಿಯರ ಆಶೀರ್ವಾದ ಪಡೆದುಕೊಂಡರು.

ಸೋಮವಾರದಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. 9 ದಿನಗಳ ಕಾಲ ನಿತ್ಯ ಬಗೆ ಬಗೆಯ ಊಟದ ವ್ಯವಸ್ಥೆ ಹಾಗೂ ಉತ್ಸವದ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಾತ್ರಾ ಉತ್ಸವ ಸಮಿತಿಯವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.