ಸೋಮವಾರ, ಜನವರಿ 24, 2022
28 °C
ನೀರು ಶುದ್ಧೀಕರಣ ಘಟಕ ವೀಕ್ಷಿಸಿದ ಸದಸ್ಯರ ನಿಯೋಗ

ಏಪ್ರಿಲ್‌ಗೆ ಕಾಳಿ ನದಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ‘ಪಟ್ಟಣದ ಜನರ ಬಹು ವರ್ಷಗಳ ಬೇಡಿಕೆಯಾದ ಕಾಳಿ ನದಿಯಿಂದ ಕುಡಿಯುವ ನೀರು ತರುವ ಯೋಜನೆ ಮುಕ್ತಾಯದ ಹಂತದಲ್ಲಿದೆ. ಏಪ್ರಿಲ್ ಮೊದಲ ವಾರದಲ್ಲಿ ನೀರು ನೀಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಜಲಮಂಡಳಿಯ ಸಹಾಯಕ ಎಂಜಿನಿಯರ್ ರವಿಕುಮಾರ ತಿಳಿಸಿದರು.

ಜಾವಳ್ಳಿಯ ನಿರ್ಮಾಣ ಹಂತದ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯ್ತಿ ಸದಸ್ಯರ ನಿಯೋಗಕ್ಕೆ ಭೇಟಿ ನೀಡಿದ ವೇಳೆ, ಕಾಮಗಾರಿಯ ಪ್ರಗತಿ ಬಗ್ಗೆ ವಿವರಿಸಿದರು.

‘ದಾಂಡೇಲಿಯಲ್ಲಿ ಪಂಪ್‌ಹೌಸ್ ಮತ್ತು ಜಾಕ್‌ವೆಲ್ ನಿರ್ಮಾಣ ವೇಗವಾಗಿ ನಡೆದಿದೆ. 16 ಕಿ.ಮೀ ದೂರದ ಜಾವಳ್ಳಿ ನೀರು ಶುದ್ಧೀಕರಣ ಘಟಕಕ್ಕೆ ನೀರು ತರಲಾ
ಗುವುದು. ಅಲ್ಲಿ ಶುದ್ಧೀಕರಿಸಿದ ನೀರನ್ನು ಪೈಪ್‌ಲೈನ್ ಮೂಲಕ ಅಳ್ನಾ
ವರದ ಮೂರು ಟ್ಯಾಂಕ್‌ಗಳಿಗೆ ತುಂಬಿಸ
ಲಾಗುವುದು. ನಂತರ ಪಟ್ಟಣದ ಪ್ರತಿ ಮನೆಗೂ 24ಗಂಟೆ ನೀರು ಒದಗಿಸ
ಲಾಗುವುದು.  3,800 ಮನೆಗಳಿಗೆ ನಲ್ಲಿ
ಯಲ್ಲಿ ನೀರು ನೀಡಲಾಗುತ್ತದೆ’ ಎಂದರು.

ಪ.ಪಂ.ಅಧ್ಯಕ್ಷೆ ಮಂಗಳಾ ರವಳಪ್ಪವನರ, ಉಪಾಧ್ಯಕ್ಷ ನದೀಮ ಕಂಟ್ರ್ಯಾಕ್ಟರ್, ಸದಸ್ಯರಾದ ಛಗನಲಾಲ ಪಟೇಲ, ಮಧು ಬಡಸ್ಕರ್, ರಮೇಶ ಕುನ್ನೂರಕರ, ಅಮೂಲ ಗುಂಜೀಕರ, ಜೈಲಾನಿ ಸುದರ್ಜಿ, ಭಾಗ್ಯವತಿ ಕುರುಬರ, ರೇಶ್ಮಿ ತೇಗೂರ, ಸುನಂದಾ ಕಲ್ಲು, ಗೋರಿ, ಅಶೋಕ ಬರಗುಂಡಿ, ಶಾಲೆಟ ಬೆರೆಟ್ಟೊ, ಅನ್ನಪೂರ್ಣ ಕೌಜಲಗಿ, ಯಲ್ಲಾರಿ ಹುಬ್ಳಿಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.