ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಮ್ಮನ ಹಬ್ಬ, ನುಡಿ ಚಿಂತನ ಸಮಾವೇಶ ಇಂದು

Last Updated 11 ಡಿಸೆಂಬರ್ 2021, 2:18 IST
ಅಕ್ಷರ ಗಾತ್ರ

ಕಲಘಟಗಿ: ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದಿಂದ ಶನಿವಾರ ಸಂಜೆ 7ಗಂಟೆಗೆ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ನಟ ದಿ.ಪುನೀತ್ ರಾಜಕುಮಾರ್ ಹಾಗೂ ರಂಗಕಲಾವಿದ, ಗಾಯಕ ದಿ.ಪ್ರಭು ಕಿಚಡಿ ವೇದಿಕೆಯಲ್ಲಿ ಕನ್ನಡಮ್ಮನ ಹಬ್ಬ ಹಾಗೂ 11ನೇ ನುಡಿ ಚಿಂತನ ಸಮಾವೇಶ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಜ್ಯೋತಿ ಗುಳೇದಗುಡ್ಡ ಮತ್ತು ದುರ್ಗೆಶ ಹಿರೇಮನಿ ಅವರಿಂದ ಜಾನಪದ ಹಾಗೂ ನಾಡಗೀತೆಗಳ ಹಾಡುಗಾರಿಕೆ, ನೃತ್ಯ ವೈಭವ ಜರುಗಲಿದೆ. ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದ ಕಲಾವಿದರಿಂದ
‘ಹೆಂಡತಿಯೇ ನಿನಗೆ ನಮೋ ನಮಃ’ ನಾಟಕ ಪ್ರದರ್ಶನಗೊಳ್ಳಲಿದೆ.

ಹಿರೇಹೊನ್ನಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲವ್ವ ರಾಮಪ್ಪ ಮಡ್ಲಿ ಅಧ್ಯಕ್ಷತೆ, ಶಾಸಕ ಸಿ.ಎಂ.ನಿಂಬಣ್ಣವರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸಮಾವೇಶಕ್ಕೆ ಚಾಲನೆ ನೀಡುವರು. ಕನ್ನಡ ಸಾಹಿತ್ಯ ಪರಿಷತ್ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಜ್ಯೋತಿ ಬೆಳಗಿಸುವರು.

ಆಸಕ್ತರು ಕೋವಿಡ್ ನಿಯಮಾವಳಿ ಪಾಲಿಸಿ ಭಾಗವಹಿಸಬೇಕು ಎಂದು ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT