ಹುಬ್ಬಳ್ಳಿ: ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿ ವರ್ಷ ನೋಂದಣಿಯಾಗುವ ವಾಹನಗಳ ಸಂಖ್ಯೆಗೆ ಹೋಲಿಸಿದರೆ ನಾಲ್ಕನೇ ಸ್ಥಾನದಲ್ಲಿ ಇರುವ ಕರ್ನಾಟಕವು, ರಸ್ತೆ ತೆರಿಗೆ ಸಂಗ್ರಹ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಅತಿ ಹೆಚ್ಚು ವಾಹನಗಳು ನೋಂದಣಿಯಾಗುವ ಉತ್ತರ
ಪ್ರದೇಶ ತೆರಿಗೆ ಸಂಗ್ರಹದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ವಾಹನಗಳ ನೋಂದಣಿ ಮತ್ತು ತೆರಿಗೆ ಸಂಗ್ರಹ ಎರಡಲ್ಲೂ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ವಾಹನಗಳ ಸಂಖ್ಯೆ ಮತ್ತು ತೆರಿಗೆ ಸಂಗ್ರಹ ವಿಷಯದಲ್ಲಿ ಉತ್ತರ
ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಈ ನಾಲ್ಕು ರಾಜ್ಯಗಳು ಹಿಂದಿನಿಂದಲೂ ಪ್ರಮುಖ ಸ್ಥಾನ ಕಾಯ್ದುಕೊಂಡಿವೆ.

ಕೇಂದ್ರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೆ 40.54 ಕೋಟಿ ವಾಹನಗಳು ನೋಂದಣಿಯಾಗಿವೆ. ಉತ್ತರಪ್ರದೇಶ ರಾಜ್ಯವೊಂದರಲ್ಲೇ 5.24 ಕೋಟಿ (ಶೇ 13ರಷ್ಟು) ವಾಹನಗಳಿವೆ. ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ
3.39 ಕೋಟಿ (ಶೇ 8.36ರಷ್ಟು) ವಾಹನಗಳಿವೆ. ಎರಡನೇ
ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 4.11 ಕೋಟಿ (ಶೇ 10.13) ವಾಹನಗಳು ಈವವರೆಗೆ ನೋಂದಣಿಯಾಗಿವೆ. ಕಾಯಂ ಮೂರನೇ ಸ್ಥಾನ ಕಾಯ್ದುಕೊಂಡ ತಮಿಳುನಾಡು ರಾಜ್ಯದಲ್ಲಿ 3.46 ಕೋಟಿ (ಶೇ 8.53) ವಾಹನಗಳಿವೆ. ಪ್ರಮುಖ ಈ ನಾಲ್ಕು ರಾಜ್ಯಗಳಲ್ಲಿಯೇ ಒಟ್ಟು 16.2 ಕೋಟಿ (ಶೇ 40) ರಷ್ಟು ವಾಹನಗಳಿವೆ.

ಅತಿ ಹೆಚ್ಚು ತೆರಿಗೆ: ಹೊಸದಾಗಿ ಖರೀದಿಸುವ ವಾಹನಗಳು ಮತ್ತು ಹಳೇ ವಾಹನಗಳ ಮೇಲೆ ವಿಧಿಸುವ ತೆರಿಗೆ ವಿಷಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೊಸದಾಗಿ ಖರೀದಿಸುವ ಬೈಕ್ಗೆ ವಿಧಿಸುವ ರಸ್ತೆ ತೆರಿಗೆಗಳು ಶೇ 10ರಿಂದ ಆರಂಭವಾಗುತ್ತದೆ. ಕಾರು ಸೇರಿ ನಾಲ್ಕು ಚಕ್ರ ಮತ್ತು ಅದಕ್ಕಿಂತ ಹೆಚ್ಚು ಚಕ್ರಗಳ ವಾಹನಗಳ ಮೇಲೆ ವಿಧಿಸುವ ರಸ್ತೆ ತೆರಿಗೆಗಳು ಶೇ 13ರಿಂದ ಆರಂಭವಾಗುತ್ತದೆ. ಬಹುತೇಕ ರಾಜ್ಯಗಳಲ್ಲಿ ವಾಹನ ತೆರಿಗೆಗೆ ಅವಧಿ ಮಿತಿ ಇದೆ. ಆದರೆ, ಕರ್ನಾಟಕದಲ್ಲಿ ಶಾಶ್ವತ ರಸ್ತೆ ತೆರಿಗೆ ಸಂಗ್ರಹಿಸುವ ಪದ್ಧತಿ ಜಾರಿಯಲ್ಲಿದೆ.

ಉತ್ತರ ಪ್ರದೇಶದಲ್ಲಿ ಬೈಕ್ಗಳಿಗೆ ರಸ್ತೆ ತೆರಿಗೆ ಶೇ 2ರಿಂದ ಆರಂಭ
ವಾಗುತ್ತದೆ. ಬೈಕ್ ದರಕ್ಕೆ ಅನುಸಾರವಾಗಿ ತೆರಿಗೆ ವಿಧಿಸ
ಲಾಗುತ್ತದೆ. ಅದೇ ರೀತಿ ಕಾರು ಸೇರಿ ಇತರೆ ನಾಲ್ಕು ಚಕ್ರದ ವಾಹನಗಳ ಮೇಲೆ ಶೇ 3ರಷ್ಟು ರಸ್ತೆ ತೆರಿಗೆ ವಿಧಿಸ
ಲಾಗುತ್ತಿದೆ. ಮಹಾರಾಷ್ಟ್ರ
ದಲ್ಲಿ ಸಿಎನ್ಜಿ/ಎಲ್ಪಿಜಿ ವಾಹನಗಳಿಗೆ ಶೇ 7ರಷ್ಟು, ಪೆಟ್ರೊಲ್ ವಾಹನಗಳಿಗೆ ಶೇ 11ರಷ್ಟು ಹಾಗೂ ಡೀಸೆಲ್ ವಾಹನಗಳಿಗೆ ಶೇ 13ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಬೈಕ್ಗಳಿಗೆ ಶೇ 10ರಷ್ಟು ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕರ್ನಾಟಕ ಬಿಟ್ಟರೆ ಅತಿಹೆಚ್ಚಿನ ಪ್ರಮಾಣದಲ್ಲಿ ರಸ್ತೆ ತೆರಿಗೆ ವಿಧಿಸುವ ರಾಜ್ಯ ತಮಿಳುನಾಡು.

‘ಕರ್ನಾಟಕದಲ್ಲಿ ರಸ್ತೆ ತೆರಿಗೆ ಹೆಚ್ಚಿದೆ ಎಂಬ ಕಾರಣಕ್ಕೆ ನ ಪ್ರಮಾಣದಲ್ಲಿದೆ ಎನ್ನುವ ಕಾರಣಕ್ಕಾಗಿ ಕೆಲವು ಜನರು ದೆಹಲಿ, ಪಾಂಡಿಚೇರಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಕೊಂಡು ತಂದು ಬಳಸುತ್ತಾರೆ. ಆದರೆ, ಇದು ನಿಯಮಬಾಹಿರ. ಪ್ರವಾಸ ಉದ್ದೇಶಕ್ಕಾಗಿ ಮಾತ್ರ ಅನ್ಯ ರಾಜ್ಯದ ಜನರು ಕೆಲವು ದಿನಗಳ ಮಟ್ಟಿಗೆ ಕರ್ನಾಟಕದಲ್ಲಿ ತಮ್ಮ ವಾಹನ ಬಳಸಬಹುದು. ಬೇರೆ ರಾಜ್ಯಗಳಿಂದ ವರ್ಗಾವಣೆ ಆಗಿ ಬರುವವರು ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಿಂದ ‘ಎನ್ಒಸಿ‘ ತೆಗೆದುಕೊಂಡು ಬರುತ್ತಾರೆ. ರಾಜ್ಯದಲ್ಲಿ ರಸ್ತೆ ತೆರಿಗೆ ಕಟ್ಟದೆ ಬೇರೆ ರಾಜ್ಯಗಳ ವಾಹನ ಓಡಾಡುವುದನ್ನು ಕಂಡು ಹಿಡಿದು ತೆರಿಗೆ ವಿಧಿಸುವ ಪ್ರಕ್ರಿಯೆ ಈಗಾಗಲೇ ಆರಂಭ ಆಗಿದೆ’ ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ನೋಂದಣಿಯಾದ ವಾಹನವನ್ನು ಕರ್ನಾಟಕದಲ್ಲಿ ಬಳಕೆ ಮಾಡುವವರು ಕಡ್ಡಾಯವಾಗಿ ಎನ್ಒಸಿ ತರಬೇಕಾಗುತ್ತದೆ. ಎನ್ಒಸಿ ಆಧರಿಸಿ ಹೊಸದಾಗಿ ನೋಂದಣಿ ಮಾಡಿಕೊಂಡು
ಕರ್ನಾಟಕದಲ್ಲಿ ಬಳಸುವುದಕ್ಕಾಗಿ ಹೊಸ ನಂಬರ್ ಒದಗಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.