ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಆನ್‌ಲೈನ್‌ ಸ್ಪರ್ಧೆ

Last Updated 10 ಜೂನ್ 2020, 7:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಸಮರ್ಥ ಪದವಿ ವಾಣಿಜ್ಯ ಕಾಲೇಜಿನ ವಿತಿಯಿಂದ ‘ಜಿಬಿಎಸ್‌ ಎಮಿನೆನ್ಸ್–2020’ ಎಂಬ ರಾಜ್ಯಮಟ್ಟದ ಅಂತರ ಕಾಲೇಜು ಆನ್‌ಲೈನ್‌ ಸ್ಪರ್ಧೆ ಆಯೋಜಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಗೌರಿ ಬುಳ್ಳಣ್ಣವರ, ಬಿ.ಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳಿಗೆ ಜೂನ್‌ 13 ಮತ್ತು 14 ರಂದು ಆಯೋಜಿಸಲಾಗಿದೆ ಎಂದರು.

ಬಿಸಿನೆಸ್‌ ಪ್ಲಾನ್‌ ಸ್ಪರ್ಧೆಯಲ್ಲಿ ಪ್ರತಿ ಕಾಲೇಜಿನಿಂದ ಐವರು, ಬಿಸಿನೆಸ್‌ ಕ್ವಿಜ್‌ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ₹25,000 ನಗದು ಬಹುಮಾನವಿದ್ದು, ವಿವಿಧ ಕಾಲೇಜುಗಳಲ್ಲಿ ಮುಂದಿನ ಅಧ್ಯಯನಕ್ಕೆ ₹4.5 ಲಕ್ಷ ಮೌಲ್ಯದ ಶಿಷ್ಯವೇತನ ದೊರೆಯಲಿದೆ ಎಂದು ಹೇಳಿದರು.

ಲಾಕ್‌ಡೌನ್‌ ಸಮಯದಿಂದ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ. ವಿದ್ಯಾರ್ಥಿಗಳನ್ನು ಚಟುವಟಿಕೆಯಿಂದ ಇಡಲು ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಮಾಹಿತಿಗೆ ಪ್ರೊ. ರಾಹುಲ್‌ ಗಲಗಲಿ ಮೊ. 87225 19529 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT