ಬುಧವಾರ, ಜುಲೈ 6, 2022
22 °C

ರಾಷ್ಟ್ರೀಯ ಸೈಕ್ಲಿಂಗ್‌ಗೆ ಕರ್ನಾಟಕ ತಂಡ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ನ. 13ರಿಂದ 16ರ ವರೆಗೆ ಆಯೋಜನೆಯಾಗಿರುವ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚಿಗೆ ಜಮಖಂಡಿಯಲ್ಲಿ ನಡೆದ ರಾಜ್ಯಮಟ್ಟದ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದವರನ್ನು ಪರಿಗಣಿಸಿ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸೈಕ್ಲಿಂಗ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ತಿಳಿಸಿದ್ದಾರೆ.

ಪುರುಷರ ಹಾಗೂ ಬಾಲಕರ ವಿಭಾಗ: ರಾಘವೇಂದ್ರ ವಂದಾಲ, ಸಾಗರ ತೇರದಾಳ, ಮಲ್ಲಿಕಾರ್ಜುನ ಯಾದವಾಡ, ಸಂಪತ್ ಪಾಸಮೇಲ, ಪ್ರತಾಪ ಪಡಚಿ, ಅಭಿಷೇಕ ಮರನೂರ, ಅನಿಲ ಕಾಳಪ್ಪಗೋಳ, ನಾಗರಾಜ ಸೋಮಗೊಂಡ ಮತ್ತು ಶ್ರೀಶೈಲ ವೀರಾಪೂರ (ಎಲ್ಲರೂ ವಿಜಯಪುರ ಕ್ರೀಡಾನಿಲಯ), ವೆಂಕಪ್ಪ ಕೆಂಗಲಗುತ್ತಿ, ಬಸವರಾಜ ಮಡ್ಡಿ, ಗುರಲಿಂಗ ಬಿದರಿ ಮತ್ತು ಮಹಾಂತೇಶ ಮದರಖಂಡಿ (ಬಾಗಲಕೋಟ ಜಿಲ್ಲೆ), ವಿಶ್ವನಾಥ ಗಡಾದ, ನಂದೆಪ್ಪ ಸವಡಿ ಮತ್ತು ಯಲಗೂರೇಶ ಗಡ್ಡಿ (ವಿಜಯಪುರ ಜಿಲ್ಲೆ). ಯಶವಂತ ಪಾವಡಿಗೌಡ್ರ (ಚಂದರಗಿ ಕ್ರೀಡಾ ಶಾಲೆ), ನವೀನ ಜಾನ್, ನವೀನ ರಾಜ್, ಕಿರಣಕುಮಾರ ರಾಜು ಮತ್ತು ಗಗನರೆಡ್ಡಿ (ಬೆಂಗಳೂರು ಜಿಲ್ಲೆ), ಮುತ್ತಪ್ಪ ನವಲಳ್ಳಿ (ಗದಗ ಜಿಲ್ಲೆ), ಪ್ರಭು ಕಾಲತಿಪ್ಪಿ (ಬೆಳಗಾವಿ ಜಿಲ್ಲೆ). ತಂಡದ ವ್ಯವಸ್ಥಾಪಕರು- ಈಶ್ವರ ಗುಳೇದ, ಕೋಚ್‌-ವಿಠ್ಠಲ ಬೋರ್ಜಿ.

ಮಹಿಳೆಯರು ಮತ್ತು ಬಾಲಕಿಯರು: ಅಂಕಿತಾ ರಾಠೋಡ ಮತ್ತು ಸಹನಾ ಕುಡಿಗಾನೂರ (ವಿಜಯಪುರ ಜಿಲ್ಲೆ), ಅಕ್ಷತಾ ಭೂತನಾಳ, ಪಾಯಲ್ ಚವ್ಹಾಣ, ಸೌಮ್ಯ ಅಂತಾಪೂರ, ಕಾವೇರಿ ಮುರನಾಳ ಮತ್ತು ದಾನಮ್ಮ ಗುರವ (ಎಲ್ಲರೂ ವಿಜಯಪುರ ಕ್ರೀಡಾ ನಿಲಯ), ಸವಿತಾ ಆಡಗಲ್ (ಕ್ರೀಡಾನಿಲಯ ಬಾಗಲಕೋಟೆ), ಕೀರ್ತಿ ರಂಗಸ್ವಾಮಿ (ಬೆಂಗಳೂರು ಜಿಲ್ಲೆ), ಅನುಪಮಾ ಗುಳೇದ, ಚೈತ್ರಾ ಬೋರ್ಜಿ, ದಾನಮ್ಮ ಚಿಚಖಂಡಿ, ಸಾವಿತ್ರಿ ಹೆಬ್ಬಾಳಟ್ಟಿ, (ಎಲ್ಲರೂ ಬಾಗಲಕೋಟೆ ಜಿಲ್ಲೆ). ವ್ಯವಸ್ಥಾಪಕರು-ರಮೇಶ ರಾಠೋಡ, ತರಬೇತುದಾರರು- ಭೀಮಪ್ಪ ವಿಜಯನಗರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು