ಮಂಗಳವಾರ, 3 ಮಾರ್ಚ್ 2026
×
ADVERTISEMENT

ಬಜೆಟ್ ನಿರೀಕ್ಷೆ | ಹುಬ್ಬಳ್ಳಿ: ಎಪಿಎಂಸಿ ಸೌಲಭ್ಯಕ್ಕೆ ₹500 ಕೋಟಿಗೆ ಬೇಡಿಕೆ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಸಮಸ್ಯೆ
Published : 3 ಮಾರ್ಚ್ 2026, 3:51 IST
Last Updated : 3 ಮಾರ್ಚ್ 2026, 3:51 IST
ADVERTISEMENT
ಫಾಲೋ ಮಾಡಿ
Comments
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸೌಕರ್ಯ ಕಲ್ಪಿಸಲು ಈ ಬಾರಿಯ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ಮೀಸಲಿಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಜಿ.ಕೆ.ಆದಪ್ಪಗೌಡರ, ಅಧ್ಯಕ್ಷ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ
ಅಮರಗೋಳದ ಎಪಿಎಂಸಿ ಮಾರುಕಟ್ಟೆ ವಿಶಾಲವಾಗಿದ್ದು ಸುತ್ತಮುತ್ತಲ ಜಿಲ್ಲೆಗಳಿಂದ ಹೆಚ್ಚು ಸಂಖ್ಯೆಯಲ್ಲಿ ರೈತರು ಬರುತ್ತಾರೆ. ಇಲ್ಲಿ ಶೀತಲೀಕರಣ ಘಟಕ ಸೇರಿ ಮೂಲಸೌಕರ್ಯಗಳ ಉನ್ನತೀಕರಣವಾಗಬೇಕಿದೆ
ಕೆ.ಎಚ್‌. ಗುರುಪ್ರಸಾದ್‌, ಎಪಿಎಂಸಿ ಕಾರ್ಯದರ್ಶಿ
ಎಪಿಎಂಸಿಗಳಲ್ಲಿ ಕುಡಿಯುವ ನೀರು ತೂಕದ ಯಂತ್ರ ವೈಫೈ ಸೌಲಭ್ಯ ಸೇರಿದಂತೆ ರೈತರಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ರೈತಭವನಗಳ ಸೌಲಭ್ಯ ಕಲ್ಪಿಸಿಕೊಡಬೇಕು
ಸುರೇಶ ಕಿರೇಸೂರ, ಮಾಜಿ ಅಧ್ಯಕ್ಷ ಎಪಿಎಂಸಿ ಅಮರಗೋಳ 
ಸೌಕರ್ಯ ಉನ್ನತೀಕರಣಕ್ಕೆ ಪ್ರಸ್ತಾವ
‘ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸೌಕರ್ಯಗಳ ಉನ್ನತೀಕರಣವಾಗಬೇಕಿದೆ’ ಎಂದು ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ತಿಳಿಸಿದರು.  ‘ಅಗತ್ಯವಿರುವ ಎಲ್ಲ ಎಪಿಎಂಸಿಗಳಲ್ಲಿ ಇ– ಟೆಂಡರ್‌ ವ್ಯವಸ್ಥೆ ಕಲ್ಪಿಸಿಕೊಡಬೇಕು. ವೈ–ಫೈ ಸೌಲಭ್ಯ ಅಳವಡಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಇ– ಸ್ವತ್ತು ಸರಳೀಕರಣ ಮಾಡಬೇಕು. ಸೂಪರ್‌ವೈಜ್‌ ಚಾರ್ಜ್‌ ರದ್ದು ಮಾಡಬೇಕು. ವರ್ತಕರಿಗೆ ಎಪಿಎಂಸಿಯಿಂದ ಹಂಚಿಕೆಯಾದ ಆಸ್ತಿಗಳ ಮೇಲೆ ತೆರಿಗೆ ವಿನಾಯಿತಿ ನೀಡಬೇಕು. ಶಿತಲೀಕರಣ ಘಟಕ ಗೋದಾಮುಗಳನ್ನು ನಿರ್ಮಾಣ ಮಾಡಬೇಕು. ಕುಡಿಯುವ ನೀರು ರಸ್ತೆ ಒಳಚರಂಡಿ ವ್ಯವಸ್ಥೆ ಇನ್ನಿತರ ಸೌಕರ್ಯ ಕಲ್ಪಿಸಲು ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT