ಹುಬ್ಬಳ್ಳಿ: ‘ತುಂಡು ಬಟ್ಟೆ ಧರಿಸಿದರೆ ಫ್ಯಾಷನ್, ಡಿಸೆಂಬರ್ 31 ರಂದು ಕುಡಿದು ಕುಪ್ಪಳಿಸಿದರೆ ಮಾತ್ರ ಕ್ಯಾಲೆಂಡರ್ ಬದಲಾಗುತ್ತದೆ ಎನ್ನುವ ಮನಸ್ಥಿಗೆ ಬಂದಿದ್ದೇವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಎಲ್ಲರೂ ಅರಿಯಬೇಕು’ ಎಂದು ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ಹೊಸೂರಿನ ಕೋರ್ಟ್ ಆವರಣದಲ್ಲಿ ಹುಬ್ಬಳ್ಳಿ ವಕೀಲರ ಸಂಘ ಸೋಮವಾರ ಹಮ್ಮಿಕೊಂಡಿದ್ದ ‘ಧನ್ಯವಾದ ಸಮರ್ಪಣೆ ಹಾಗೂ ನೂತನ ವಕೀಲರಿಗೆ ಸ್ವಾಗತ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ದೇಶದ ಯುವ ಜನತೆಯನ್ನು ಹಾಳು ಮಾಡುವ ಎಲ್ಲವೂ ಬರುತ್ತಿವೆ. ಯುವ ಜನರು ಎಚ್ಚೆತ್ತುಕೊಳ್ಳಬೇಕು’ ಎಂದರು.

‘ಭಾರತವನ್ನು ಶಸ್ತ್ರಾಸ್ತ್ರಗಳಿಂದ ಗೆಲ್ಲಲು ಸಾಧ್ಯವಿಲ್ಲ ಎಂದರಿತ ಕೆಲವು ರಾಷ್ಟ್ರಗಳು, ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿವೆ. ಯುವಕರನ್ನು ಗುರಿಯಾಗಿಸಿಕೊಂಡು ಹೊಸತಿನ ಹೆಸರಲ್ಲಿ ದಾರಿ ತಪ್ಪಿಸುತ್ತಿವೆ. ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಕೆಲವು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುತ್ತಿರುವುದು ಕಂಡು ಬರುತ್ತಿವೆ. ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ’ ಎಂದರು.

ಹೈಕೋರ್ಟ್ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ‘ನಮ್ಮಲ್ಲಿ ಸಾಕಷ್ಟು ಜ್ಞಾನ ಭಂಡಾರವಿದ್ದರೂ ಮೊಬೈಲ್ ಮೇಲೆ ಅವಲಂಬಿತರಾಗಿದ್ದೇವೆ. ಸಮಾಜಕ್ಕೆ ಉತ್ತಮ ವಕೀಲರ ಅವಶ್ಯಕತೆಯಿದೆ’ ಎಂದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್. ಭಾರತಿ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಮಟ್ಟಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ದಾಟನಾಳ ಮಾತನಾಡಿದರು. ನೂತನ ಪದಾಧಿಕಾರಿಗಳಾದ ಎಸ್.ವೈ. ದುಂಡಿರಡ್ಡಿ, ಸವಿತಾ ಪಾಟೀಲ, ಎಂ.ಎಂ. ಹಳ್ಳಿ, ಸಂತೋಷ ರೆಡ್ಡಿ, ಶ್ರೀನಿವಾಸ ಹೆಬ್ಬಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.