ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಕಸ ಸಂಗ್ರಹ ವಾಹನ, ಸಿಬ್ಬಂದಿ ಕೊರತೆ

Published 11 ಫೆಬ್ರುವರಿ 2024, 15:56 IST
Last Updated 11 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಧಾರವಾಡ: ಕಸ ಸಂಗ್ರಹ ವಾಹನಗಳು ನಗರದ ಕೆಲವು ಬಡಾವಣೆಗಳಿಗೆ ವಾರಕ್ಕೊಮ್ಮೆ ಬರುತ್ತಿವೆ. ರಸ್ತೆ ಬದಿ, ಕೆರೆ ದಂಡೆ, ನಿವೇಶನ, ಪಾಳುಕಟ್ಟಡ ಪ್ರದೇಶಗಳಲ್ಲಿ ಕಸ ಎಸೆಯುವ ಪರಿಪಾಟ ಅವ್ಯಾಹತವಾಗಿದೆ.

ಕೆಲವು ಕಡೆಗಳಿಗೆ ಕಸ ಸಂಗ್ರಹ ವಾಹನಗಳು ಹೋಗಲ್ಲ. ಇಂಥ ಓಣಿ, ಪ್ರದೇಶಗಳಲ್ಲಿ ರಸ್ತೆ ಬದಿ, ನಿವೇಶನಗಳಲ್ಲಿ ಕಸ ಸುರಿಯವುದು ಹೆಚ್ಚು. ರಸ್ತೆ ಬದಿ, ನಿವೇಶನಗಳಲ್ಲಿ ಕಸ ಸುರಿದರೆ ದಂಡ ವಿಧಿಸಲಾಗುವುದು ಎಂಬ ಫಲಕಗಳು ನಾಮಕಾವಸ್ತೆ ಎಂಬಂತಾಗಿದೆ. ಈ ಫಲಕಗಳ ಬುಡದಲ್ಲಿಯೇ ಕಸ ಸುರಿಯುತ್ತಾರೆ. ಕಸ ವಿಲೇವಾರಿ ಘಟಕವಿರುವ ಹೊಸ ಯಲ್ಲಾಪುರ ಸುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ದುರ್ನಾತದ ಸಮಸ್ಯೆ ತಪ್ಪಿಲ್ಲ.

‘ಕಸ ಸಂಗ್ರಹ ವಾಹನ ಮತ್ತು ಸಿಬ್ಬಂದಿ ಕೊರತೆ ಇದೆ. ಹೊಸದಾಗಿ ಆಟೊ, ಟಿಪ್ಪರ್‌ಗಳ ಖರೀದಿ ನಿಟ್ಟಿನಲ್ಲಿ ‍ಪ್ರಕ್ರಿಯೆ ನಡೆಯುತ್ತಿದೆ. ಹೊಸ ವಾಹನಗಳು ಕಸ ಸಂಗ್ರಹ, ವಿಲೇವಾರಿಯ ಬಹುಪಾಲು ಸಮಸ್ಯೆ ಪರಿಹಾರವಾಗಲಿದೆ‘ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಮೂರು ದಿನಕ್ಕೊಮ್ಮೆಯಾದರೂ ನಿಯಮಿತವಾಗಿ ಎಲ್ಲ ಬಡಾವಣೆಗಳಲ್ಲಿ ಕಸ ಸಂಗ್ರಹ ವಾಹನ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT