ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಸರ್‌ ವೇದ: ನೋವು ರಹಿತ, ಶಸ್ತ್ರಕ್ರಿಯಾ ರಹಿತ ಚಿಕಿತ್ಸೆ

ನೋವು ನಿವಾರಣೆಯಲ್ಲೊಂದು ಹೊಸ ಶೋಧನೆ
Last Updated 1 ಜುಲೈ 2018, 11:27 IST
ಅಕ್ಷರ ಗಾತ್ರ

ಆಧುನಿಕ ಔಷಧವು ರೋಗಿಯ ಗುಣಲಕ್ಷಣಗಳಿಗೆ ಬದಲಾಗಿ ರೋಗ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಲು ನಮಗೆ ಕಲಿಸಿದೆ, ಔಷಧಿಗಳಿಗೆ ನಿಲುಕದಿದ್ದರೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯಂತಹ ಮುಂದಿನ ಹಂತಕ್ಕೆ ನೇರವಾಗಿ ಹೋಗುತ್ತೇವೆ. ಆಧುನಿಕ ದಂತಚಿಕಿತ್ಸಾ ವಿಧಾನವು ಕೂಡ ಇಂತಹ ನಿಯಮಕ್ಕೆ ಹೊರತಾಗಿಲ್ಲ. ತಾಂತ್ರಿಕ ಶ್ರೇಷ್ಠತೆಯಿಂದಾಗಿ ನಮ್ಮ ಅನ್ವೇಷಣೆಯಲ್ಲಿ ನಾವು ನೋವು ನಿವಾರಣೆ ಮಾಡುವ ಇನ್ನಿತರ ಕೆಲವು ಕ್ರಮಗಳನ್ನು ಮರೆತಿದ್ದೇವೆ. ಎಲ್ಲೋ ನಮ್ಮ ಶರೀರಶಾಸ್ತ್ರವನ್ನು ನಾವು ಲಘುವಾಗಿ ತೆಗೆದುಕೊಂಡಿದ್ದೇವೇನೋ ಮತ್ತು ರೋಗದ ಗುಣ, ಸ್ವಭಾವಗಳನ್ನು ಕಡೆಗಣಿಸಿದ್ದೇವೆ ಎಂದು ಕೆಲವೊಮ್ಮೆ ಅನ್ನಿಸುತ್ತದೆ.

‘ಚಿಕಿತ್ಸಕ ಲೇಸರ್‌ಗಳು’ ಅಥವಾ 'ಕಡಿಮೆ ಮಟ್ಟದ ಲೇಸರ್‌ಗಳು’ ಆಧುನಿಕ ಔಷಧ ಮತ್ತು ದಂತಚಿಕಿತ್ಸಾಶಾಸ್ತ್ರಕ್ಕೆ ಹೊಸದೊಂದು ಸ್ಪರ್ಶ ನೀಡುವ ಅತ್ಯುತ್ತಮ ಸಾಧನಗಳಾಗಿವೆ. ಲೇಸರ್ ಔಷಧ ಅಥವಾ ಲೇಸರ್ ಚಿಕಿತ್ಸೆಯು ಕೆಳಮಟ್ಟದ ಲೇಸರ್‌ಗಳ ಬಳಕೆಯನ್ನು ಒಳಗೊಂಡಿರುತ್ತದೆ, ಇದು ಗಾಯಗೊಂಡ, ಹಾನಿಗೊಳಗಾದ ಅಥವಾ ರೋಗಪೀಡಿತವಾದ ಅಂಗಾಂಶಗಳನ್ನು ಕತ್ತರಿಸಲು ವಿನ್ಯಾಸಗೊಳಿಸಲಾಗಿರುವ ಉನ್ನತ ಶಕ್ತಿಯ ಶಸ್ತ್ರಚಿಕಿತ್ಸಾ ವಿಧಾನಗಳಾಗಿವೆ. ಈ ಚಿಕಿತ್ಸಕ ಲೇಸರ್‌ಗಳು ರೋಗಿಯ ನೋವು ತಗ್ಗಿಸುತ್ತವೆ, ರಕ್ತದ ಪರಿಚಲನೆಯನ್ನು ಸುಧಾರಿಸುತ್ತವೆ ಹಾಗೆಯೇ ಊತವನ್ನು ತಗ್ಗಿಸುತ್ತವೆ ಮತ್ತು ಚಿಕಿತ್ಸೆ ಸಮಯವನ್ನು ಬಹಳ ಕಡಿಮೆ ಮಾಡುತ್ತವೆ.

ಲೇಸರ್ ಚಿಕಿತ್ಸೆಯ ಇತಿಹಾಸ

ಕ್ರಿಸ್ತ ಪೂರ್ವ 2000ದಲ್ಲಿಯೇ ರೋಗವನ್ನು ವಾಸಿಮಾಡಲು ಬೆಳಕಿನ ಬಳಕೆ ಮಾಡುವ ವಿಧಾನ ಪ್ರಾಚೀನ ಈಜಿಫ್ಟ್‌ನಲ್ಲಿ ಕಂಡುಬಂದಿದೆ. ಲೇಸರ್ ಬೆಳಕು ವಿಶಿಷ್ಟವಾಗಿದೆ. ಇದಕ್ಕೆ ರೋಗವನ್ನು ಗುಣಪಡಿಸುವ ಶಕ್ತಿಯಿರುವುದು ಸಂಶೋಧನೆಗಳಿಂದ ಪತ್ತೆಯಾಗಿದೆ. ಕತ್ತರಿಸಿದ ಇಲಿಗಳ ಕೂದಲುಗಳ ಮೇಲೆ ಲೇಸರ್ ಬೆಳಕಿನ ಕಡಿಮೆ ಪ್ರಖರತೆಯನ್ನು ಹಾಯಿಸಿದಾಗ ಅವು ವೇಗವಾಗಿ ಬೆಳೆಯುತ್ತಿರುವುದನ್ನು ವೈಜ್ಞಾನಿಕವಾಗಿ ಗಮನಿಸಿದ ಡಾ. ಎಂಡ್ರೆ ಮಾಸ್ಟರ್ ರೋಗ ಚಿಕಿತ್ಸೆಗೆ ಈ ವಿಧಾನವನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಕ್ರಾಂತಿಯನ್ನೇ ಮಾಡಿದ ಎನ್ನಬಹುದು. ಆ ಬಳಿಕ ಲೇಸರ್‌ ಚಿಕಿತ್ಸಾ ವಿಧಾನದಲ್ಲಿ ಸಾಕಷ್ಟು ಬೆಳವಣಿಗೆಗಳು, ಸಂಶೋಧನೆಗಳು ನಡೆದವು.

ಮ್ಯಾಜಿಕ್ ಹಿಂದೆ ಮಿಸ್ಟರಿ!

ಲೇಸರ್ ಬೆಳಕಿನ ಫೋಟಾನ್‌ಗಳು ಚರ್ಮದ ಮೂಲಕ ತೂರಿಕೊಳ್ಳುತ್ತವೆ ಮತ್ತು ಕ್ರೊಮೊಫೋರ್ಸ್ ಎಂಬ ದೇಹದ ಜೀವಕೋಶಗಳ ವಿಶೇಷ ಘಟಕಗಳಿಂದ ಹೀರಿಕೊಳ್ಳಲ್ಪಡುತ್ತವೆ. ದ್ಯುತಿಸಂಶ್ಲೇಷಣಾ ಕ್ರಿಯೆಗಳ ಮೂಲಕ ಸಸ್ಯಗಳಿಗೆ ಶಕ್ತಿಯನ್ನು ಸೃಷ್ಟಿಸುವಂತೆ, ಹಾನಿಗೊಳಗಾದ ಅಥವಾ ಗಾಯಗೊಂಡ ಆ ಅಂಗಾಂಶಗಳಲ್ಲಿ ಕೋಶದಲ್ಲಿನ ಫೋಟಾನ್‌ಗಳ ಹೀರಿಕೊಳ್ಳುವಿಕೆ ಸೆಲ್ಯುಲಾರ್ ಶಕ್ತಿಯನ್ನು ವಿಶೇಷವಾಗಿ ಹೆಚ್ಚಿಸುತ್ತದೆ. ಹೀಗಾಗಿ ನಮ್ಮೊಳಗೆ ಸೆಲ್ಯುಲಾರ್ ಶಕ್ತಿಯನ್ನು ಉತ್ಪಾದಿಸುವ ಮೂಲಕ ನಾವು ರೋಗದ ವಿರುದ್ಧ ಹೋರಾಡಿ ದೇಹವು ನೈಸರ್ಗಿಕವಾಗಿ ಗುಣಪಡಿಸುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

ಆಧುನಿಕ ಔಷಧ ಮತ್ತು ದಂತ ವೈದ್ಯಕೀಯ ಶಾಸ್ತ್ರದಲ್ಲಿ ಇವುಗಳ ಬಳಕೆ

ಹಲ್ಲುಗಳನ್ನು ಸರಿಪಡಿಸಲು 'ದಂತವೈದ್ಯರು ಮಾಡುವ ಕಸರತ್ತುಗಳನ್ನು ಮರೆತುಬಿಡಿ, ಹಲ್ಲುಗಳನ್ನು ಸರಿಪಡಿಸಲು ಲೇಸರ್‌ಗಳನ್ನು ಬಳಸಿ!' ಎನ್ನುವುದು ಈಗಿನ ಟ್ರೆಂಡ್‌ ಆಗಿದೆ. ಪ್ರಸ್ತುತ ದಿನಗಳಲ್ಲಿ ಹಲ್ಲಿನ ರೋಗಿಗಳ ಸಮಸ್ಯೆಗಳನ್ನು ಬಗೆಹರಿಸುವ ವಿಧಾನದಲ್ಲಿ ಚಿಕಿತ್ಸಕ ಲೇಸರ್‌ಗಳು ಈಗಾಗಲೇ ಕ್ರಾಂತಿ ಮಾಡಿವೆ ಅನ್ನಬಹುದು. ಇವೆಲ್ಲ ಈಗ ಇಲ್ಲಿಯೇ ಹುಬ್ಬಳ್ಳಿ-ಧಾರವಾಡದಲ್ಲಿ ಲಭ್ಯವಾಗುತ್ತಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

ಅನೇಕ ವೈದ್ಯಕೀಯ ಮತ್ತು ದಂತ ಸಮಸ್ಯೆಗಳಿಗೆ ನೋವುರಹಿತ ಹಾಗೂ ಇನ್ನೂ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಒದಗಿಸುವುದಕ್ಕಾಗಿ ಲೇಸರ್ ಔಷಧಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರತವಾಗಿದೆ. ಇದಕ್ಕಾಗಿ ಸುಮಾರು 37 ದೇಶಗಳಲ್ಲಿ 81 ವಿಶ್ವವಿದ್ಯಾಲಯಗಳು 230 ಕ್ಕೂ ಹೆಚ್ಚು ಧನಾತ್ಮಕ ಸಂಶೋಧನಾ ಅಧ್ಯಯನಗಳನ್ನು ನಡೆಸಿವೆ. ಇದು ಶೇ 80 ರಿಂದ 95 ರಷ್ಟು ಯಶಸ್ಸಿನ ಪ್ರಮಾಣವನ್ನು ತೋರಿಸಿದೆ. ಅವುಗಳಲ್ಲಿ–

ಲೇಸರ್ ಫಿಸಿಯೋಥೆರಪಿ (ನೋವು-ಮುಕ್ತ ಚಿಕಿತ್ಸೆ), ಬೆನ್ನು ನೋವು, ಕತ್ತಿನ ನೋವು, ನರರೋಗ ಸಿಂಡ್ರೋಮ್ಸ್, ಸಯಾಟಿಕಾ, ಸಂಧಿವಾತ ಕೀಲುಗಳು (ಮೊಣಕಾಲು,ಹಿಮ್ಮಡಿ,ಮೊಣಕೈ,ಭುಜ), ಟೆನಿಸ್ ಎಲ್ಬೊ, ಸ್ನಾಯು ನೋವು, ಕ್ರೀಡಾ ಗಾಯಗಳು, ಉಳುಕು, ಮಧುಮೇಹದಿಂದಾ ಹುಣ್ಣು (ಗ್ಯಾಂಗ್ರಿನ್‌), ಅಪಘಾತದಿಂದಾದ ನೋವು, ಚರ್ಮದ ಮೇಲಿನ ಕಲೆಗಳು, ಮೊಡವೆ, ಮುಖದ ಸೋಂಕು ನಿವಾರಣೆ ಇತ್ಯಾದಿಗಳಿಗೆ ಬಳಕೆ ಮಾಡಲಾಗುತ್ತದೆ.

ದಂತ ಚಿಕಿತ್ಸಾ ವಿಧಾನದಲ್ಲಿ ಲೇಸರ್‌ ಬಳಕೆ

ಡೆಂಟಲ್ ಕ್ಯಾರೀಸ್ (ಕುಳಿಗಳನ್ನು ಪತ್ತೆ ಹಚ್ಚುವುದು ಹಾಗೂ ನೋವು ರಹಿತ ಚಿಕಿತ್ಸೆ), ಡೆಂಟಿಟಿಯೋ ಡಿಫಿಸಿಲಿಸ್ (ಮಕ್ಕಳಲ್ಲಿ ಹಲ್ಲು ಹುಟ್ಟುವ ಸಮಸ್ಯೆಗಳು), ಎಂಡೋಡಾಂಟಿಕ್ಸ್ , ದಂತ ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವ, ನೋವು ಮತ್ತು ಗುಣಪಡಿಸುವಿಕೆಯನ್ನು ನಿಯಂತ್ರಿಸಲು, ರೋಗಿಯು ಮಧುಮೇಹವನ್ನು ಹೊಂದಿದ್ದಾಗ ದಂತ ಚಿಕಿತ್ಸಾ ಸಮಯದಲ್ಲಿ ಒಸಡುಗಳಲ್ಲಿ ರಕ್ತಸ್ರಾವ ತಡೆಗಟ್ಟಲು , ಅರಿವಳಿಕೆಯ ಗಾಢತೆ ಹೆಚ್ಚಿಸಲು, ಲ್ಯೂಕೊಪ್ಲಾಕಿಯಾ (ತಂಬಾಕು ಜಗಿಯುವುದರಿಂದ ಉಂಟಾದ ಬಾಯಿ ಕ್ಯಾನ್ಸರ್ ಕೋಶಗಳ ಪತ್ತೆಗೆ), ಕ್ಯಾನ್ಸರ್ ಔಷಧಿಗಳ ವಿಕಿರಣಗಳಿಂದಾಗಿ ಆಗುವ ಹಾನಿ ತಡೆಗಟ್ಟಲು, ಹಲ್ಲಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನರಗಳಿಗೆ ಆಗುವ ಗಾಯದ ಪ್ರಮಾಣ ತಡೆ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಲೇಸರ್‌ ಚಿಕಿತ್ಸಾ ವಿಧಾನ ಬಳಕೆ ಮಾಡಲಾಗುತ್ತಿದೆ.

ವಯಸ್ಕರಲ್ಲಿ ಸುಮಾರು ಶೇ 80 ರಷ್ಟು ಜನರಲ್ಲಿ ಪೆರಿಯೊಡಾಂಟಲ್ ಅಥವಾ ಹಲ್ಲುಗಳ ನಡುವಿನ ಬಿರುಕು ಹೆಚ್ಚುವ, ಒಸಡಿನಲ್ಲಿ ರಕ್ತಸ್ತ್ರಾವ ಆಗುವ, ಹಲ್ಲು ಅಲುಗಾಡುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಅಕಾಲದಲ್ಲಿ ಹಲ್ಲುಗಳು ಉದುರುವಿಕೆ ಆಗುತ್ತದೆ, ಒಸಡಿನಲ್ಲಿ ರಕ್ತಸ್ರಾವ ಆಗುತ್ತದೆ, ಒಂದು ವೇಳೆ ಮಧುಮೇಹವಿದ್ದಲ್ಲಿ ಇದರ ಪ್ರಮಾಣ ಹೆಚ್ಚು. ಕಾಲಕಾಲಕ್ಕೆ ಹಲ್ಲುಗಳನ್ನು ಸ್ವಚ್ಛಗೊಳಿಸುವಿಕೆಯಿಂದ ಮಾತ್ರವೇ ಹಲ್ಲಿನ ಸುತ್ತಲೂ ಆಗಿರುವ ಈ ಸೋಂಕನ್ನು ಸಂಪೂರ್ಣವಾಗಿ ಪರಿಹರಿಸಲಾಗುವುದಿಲ್ಲ. ಇಂತಹ ಸ್ಥಿತಿ ಹೆಚ್ಚಿದಾಗ ಹಲ್ಲುಗಳ ಸುತ್ತಲಿನ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಸೇರಿಕೊಂಡು ಕರುಳಿನ ಕಾಯಿಲೆ, ಹೃದಯದ ಕಾಯಿಲೆ ಇತ್ಯಾದಿ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಇದನ್ನೆಲ್ಲ ಹಲ್ಲುಗಳಿಗೆ ನೀಡುವ ಸೂಕ್ತ ಲೇಸರ್‌ ಚಿಕಿತ್ಸೆ ಮೂಲಕ ತಡೆಯಲು ಸಾಧ್ಯ. ಈ ಹೊಸ ತಂತ್ರಜ್ಞಾನವು ಅಸಾಧ್ಯವೆನ್ನಿಸುವ ಇಂತಹ ಹಲವಾರು ಹಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

(ಡಾ.ಚಂದ್ರಶೇಖರ್ ಯಾವಗಲ್
ನಿರ್ದೇಶಕ , ಯಾವಗಲ್‌ ಹೆಲ್ತ್‌ ಫೌಂಡೇಷನ್‌
ಲೇಸರ್ ಸೆಂಟರ್ ಮತ್ತು ಇನ್‌ಸ್ಟಿಟ್ಯೂಟ್‌, ವಿದ್ಯಾನಗರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT