ಧಾರವಾಡ: ‘ಅವಳಿ ನಗರದಲ್ಲಿ (ಹುಬ್ಭಳ್ಳಿ–ಧಾರವಾಡ) 64 ಸಾವಿರ ಬೀದಿದೀಪದ ಕಂಬಗಳಿವೆ. ಬೆಳಕಿನ ಹಬ್ಬ ದೀಪಾವಳಿ ಹೊತ್ತಿಗೆ ಎಲ್ಲ ಕಂಬಗಳಿಗೂ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.

ಧಾರವಾಡ ಜರ್ನಲಿಸ್ಟ್ ಗಿಲ್ಡ್ನಲ್ಲಿ ಮಂಗಳವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಎಲ್ಇಡಿ ಬಲ್ಬ್ ಅಳವಡಿಕೆ ಕಾರ್ಯ ಶುರುವಾಗಿದೆ. ಎಲ್ಲ ಕಡೆ ತ್ವರಿತವಾಗಿ ಅಳವಡಿಸಲು ಸೂಚಿಸಲಾಗಿದೆ’ ಎಂದರು.

ನಗರದ ಕೆಲ ವಾರ್ಡ್ಗಳಲ್ಲಿ ಕೆಲವೆಡೆ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಐದು ದಿನಕ್ಕೊಮ್ಮೆ ಈ ಪೂರೈಸಲು ಕ್ರಮ ವಹಿಸಲಾಗುವುದು. 24X7 ನೀರು ಪೂರೈಕೆ ಯೋಜನೆಯನ್ನು ಎಲ್ಲ ವಾರ್ಡ್ಗಳಲ್ಲಿ ಅನುಷ್ಠಾನಗೊಳಿಸುವ ಗುರಿ ಇದೆ. ಪೈಪ್ ಅಳವಡಿಕೆಗೆ ರಸ್ತೆ ಭಾಗದಲ್ಲಿ ಅಗೆದು ಮುಚ್ಚಿರುವ ಕಡೆಗಳಲ್ಲಿ ಆಗಿರುವ ತಗ್ಗುಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದರು.

‘ಲ್ಯಾಂಡ್ ಬ್ಯಾಂಕ್’ ವ್ಯವಸ್ಥೆ ಮಾಡಲಾಗುವುದು. ಕಚೇರಿ, ಇತ್ಯಾದಿ ಸ್ಪಾಪನೆಗೆ ಜಾಗ ಗುರುತಿಸಲಾಗುವುದು. ನಗರದ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುವುದು. ಕೈಗಾರಿಕೆಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿ ನೆರವು ಪಡೆಯಲಾಗುವುದು. ಉದ್ಯಾನಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುವುದು ಎಂದರು.

ನಗರದ ಉದ್ಯಾನ, ಮಾರುಕಟ್ಟೆ ಪ್ರದೇಶ ಇತರೆಡೆಗಳಲ್ಲಿ ಜಲ ಬಳಕೆ ರಹಿತ ಮೂತ್ರಾಲಯ ನಿರ್ಮಿಸಲಾಗುವುದು. ಪೌರಕಾರ್ಮಿಕರ ಹಾಜರಾತಿಗೆ ಮುಖ ಚಹರೆ (ಫೇಸ್ ಐಂಡೆಂಟಿಫಿಕೇಷನ್) ಮಾಪಕ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಾಲ್ಕು ವಲಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ನಗರದಲ್ಲಿ ವಿದ್ಯುತ್, ಇತರ ಕಂಬಗಳಲ್ಲಿ ಕೇಬಲ್ ಜೋತು ಬಿದ್ದಿವೆ. ಅವುಗಳನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು. ಎಲ್ಲೆಂದರಲ್ಲಿ ಬ್ಯಾನರ್, ಬಂಟಿಂಗ್ಸ್ ಕಟ್ಟುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ, ‘ತ್ರಿಡಿ‘ ಸ್ಮಾರ್ಟ್ ಬೋರ್ಡ್ ಪರಿಚಯಿಸಲು ಸಿದ್ಧತೆ ನಡೆದಿದೆ ಎಂದರು.

ನಗರದ ಕಲಾ ಮಂದಿರ ಕಟ್ಟಡ ರಿಪೇರಿಗೆ ಕ್ರಮ ವಹಿಸಲಾಗುವುದು. ನಗರದ ಸೂಪರ್, ನೆಹರೂ ಮಾರುಕಟ್ಟೆಯಲ್ಲಿ ಮಹಿಳಾ ವ್ಯಾಪಾರಸ್ಥರ ಅನುಕೂಲಕ್ಕೆ ಸ್ಥಳ ಗುರುತಿಸಿ, ವ್ಯವಸ್ಥಿತ ಶೌಚಾಲಯ ನಿರ್ಮಿಸಲಾಗುವುದು.

ಗಿಲ್ಡ್ ಅಧ್ಯಕ್ಷ ಬಸವರಾಜ್ ಹೊಂಗಲ್, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪಇದ್ದರು.

ಹುಬ್ಬಳ್ಳಿ-ಧಾರವಾಡ ಮಹಾನಗರದ ಕಸ ನಿರ್ವಹಣೆಗೆ ಲಖನೌ ಮಾದರಿ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ. ‘ಬಯೋ ಮೈನಿಂಗ್‘ ಬಳಸಿ ಕಸದ ಗುಡ್ಡೆಗಳನ್ನು ಕರಗಿಸಿ ‘ಮಿಯೊವಾಕಿ‘ ವನ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗಿದೆ
ಜ್ಯೋತಿ ಪಾಟೀಲ ಮೇಯರ್ ಹು–ಧಾ ಮಹಾನಗರ ಪಾಲಿಕೆ

‘ಬೀಡಾಡಿ ದನ ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ಕ್ರಮ‘

ಅವಳಿನಗರದಲ್ಲಿ ಬೀಡಾಡಿ ದನಗಳು ನಾಯಿಗಳ ಹಾವಳಿ ತಪ್ಪಿಸಲು ಕ್ರಮ ವಹಿಸಲಾಗುವುದು. ಬೀಡಾಡಿ ದನಗಳನ್ನು ಮನೆಗಳಲ್ಲಿ ಕಟ್ಟಿಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗುವುದು. ಸ್ಪಂದಿಸದಿದ್ದರೆ ಕಾರ್ಯಾಚರಣೆ ನಡೆಸಿ ಅವುಗಳಿಗೆ ಟ್ಯಾಗ್ ಅಳವಡಿಸಿ ಗೋಶಾಲೆಗೆ ರವಾನಿಸಲಾಗುವುದು ಎಂದು ಜ್ಯೋತಿ ಪಾಟೀಲ ತಿಳಿಸಿದರು. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಈ ಕಾರ್ಯಕ್ಕೆ ನಗರದ ಹೊರವಲಯದಲ್ಲಿ ಜಾಗ ಗುರುತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.