ಭಾನುವಾರ, ಜನವರಿ 26, 2020
18 °C

ಕದಂಬ ಸೈನ್ಯದಿಂದ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರೆಯಬೇಕು ಎಂದರೆ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಸರ್ಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ನಟ, ನಟಿಯರು ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕದಂಬ ಸೈನ್ಯದ ಪದಾಧಿಕಾರಿಗಳು ಮಂಗಳವಾರ ಪತ್ರ ಚಳವಳಿ ನಡೆಸಿದರು.

ಚಿತ್ರ ನಟರಾದ ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌ ಹಾಗೂ ಇತರರಿಗೆ ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂಬ ಪತ್ರವನ್ನು ಮುಖ್ಯ ಅಂಚೆ ಕಚೇರಿಯಿಂದ ರವಾನಿಸಿದರು.

ಕದಂಬ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ,‘ಕನ್ನಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರಕಿಸಲು ಹೋರಾಟ ಮಾಡಬೇಕಿದೆ. ಜನಪ್ರತಿನಿಧಿಗಳು ರಾಜಕಾರಣ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಚಿತ್ರ ನಟರು ಒಂದಾಗಿ ಹೋರಾಟದ ಮೂಲಕ ಅವರ ಮೇಲೆ ಒತ್ತಡ ತರಬೇಕು’ ಒತ್ತಾಯಿಸಿದರು.

ಎ. ನಾಗೇಂದ್ರ, ವಿಜಯಕುಮಾರ ಶೆಟ್ಟಿ, ಮಂಜುನಾಥ ಬುರುಡಿ, ಎನ್‌. ರಾಜೇಗೌಡ ಇದ್ದರು.

ಪ್ರತಿಕ್ರಿಯಿಸಿ (+)