ಮಧ್ವಾಚಾರ್ಯರ ಮಹೋತ್ಸವ

ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಮಧ್ವಾಚಾರ್ಯರ ಮಹೋತ್ಸವ ಆಯೋಜಿಸಲಾಗಿತ್ತು.
ವೇದ ಪೀಠದ ಅಧ್ಯಕ್ಷ ಕಂಠಪಲ್ಲಿ ಆಚಾರ್ಯರು ಮಾತನಾಡಿ, ‘ಭಕ್ತಿಯಿಂದ ಮೋಕ್ಷ, ಮುಕ್ತಿ ಸಿಗುತ್ತದೆ. ಮೋಕ್ಷ ಎಂದರೆ ದುಃಖದಿಂದ ಬಿಡುಗಡೆ ಹೊಂದುವುದು ಎಂದು ಮದ್ವಾಚಾರ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.
ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಗೌರವ ಉಪಾಧ್ಯಕ್ಷ ಹನುಮಂತ ಕೊಟಬಾಗಿ ಮಾತನಾಡಿ, ‘ವಿಶ್ವಗುರು ಮಧ್ವಾಚಾರ್ಯರ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ’ ಎಂದರು.
ಪ್ರಕಾಶ ಶೇಟ್ ಮಾತನಾಡಿ, ‘ನೆಮ್ಮದಿಯ ಜೀವನಕ್ಕೆ ಅಧ್ಯಾತ್ಮ ಬಹಳ ಅವಶ್ಯ. ಇಂತಹ ಅಧ್ಯಾತ್ಮದ ಮಹತ್ವ ಸಾರುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
ಆನಂದ ವಿಷ್ಣು ಮಮದಾಪುರ ಅವರು, ಮಧ್ವಾಚಾರ್ಯರ ಐದು ತತ್ವಗಳ ಬಗ್ಗೆ ತಿಳಿಸಿದರು. ನಿರ್ಮಲ ಅಕ್ಕ ಹಾಗೂ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.