ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 44ರ ಸಂಗಿನಿ ವಿಲಾ ಕಾಲೊನಿ, ಸನ್ ಸಿಟಿ ಕಾಲೊನಿ, ಆಂಜನೇಯ ಬಡಾವಣೆ ಹಾಗೂ ಶಬರಿ ನಗರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಭೇಟಿ ನೀಡಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಈ ವೇಳೆ ಮಾತನಾಡಿದ ಅವರು, ಬಡಾವಣೆಗಳ ಎಲ್ಲ ರಸ್ತೆಗಳ ಅಭಿವೃದ್ಧಿ, ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.

ಸಂಗಿನಿ ವಿಲಾದಿಂದ ರೈಲ್ವೆ ಟ್ರ್ಯಾಕ್ ವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಜತೆಗೆ ಈ ಪ್ರದೇಶ ಎಲ್ಲ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಉಮಾ ಮುಕುಂದ, ವಾರ್ಡ್ ಅಧ್ಯಕ್ಷ ನಿಕಿಲ್ ವಂಗಿ, ಪ್ರಮುಖರಾದ ವಿನೋದ ರೇವಣಕರ್, ಪ್ರೀತಮ್ ಇರಕಲ್, ರಾಜು ಪಟಾಡಿಯಾ, ಸೋಮನಾಥ ಮೆರವಾಡೆ, ವಿಜಯ ಪೂಜಾರ, ಶಂಕರ್, ಸಚಿನ ಕಲಾಲ್, ಶ್ರವಣ ಮಹಾಜನ್, ವಾದಿರಾಜ ಕಟ್ಟಿ, ಸೋಮನಾಥ ಗಿರೆಪ್ಪಗೌಡರ, ಶಿವು ಶೆಟ್ಟರ್, ಗೀತಾ ಕುಬಸದ, ಶಂಕರ ಕಡಕುಂಟ್ಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.