ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಹೆಲಿಕಾಪ್ಟರ್ ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ

Last Updated 10 ಮೇ 2022, 15:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಹೆಲಿಕಾಪ್ಟರ್ ಟಿಕೆಟ್ ಬುಕ್ ಮಾಡಲು ಮುಂದಾದ ಉಣಕಲ್‌ನ ಪ್ಯಾಟಿಸಾಲ ಓಣಿ ಬಾಲಚಂದ್ರ ಹಳೆಮನಿ ಅವರಿಗೆ ಅಪರಿಚಿತನೊಬ್ಬ ₹1.77 ಲಕ್ಷ ವಂಚಿಸಿದ್ದಾನೆ.

ಬಾಲಚಂದ್ರ ಅವರ ಕುಟುಂಬದ 15 ಸದಸ್ಯರು ಉತ್ತರಾಖಂಡದ ಘಾಟಾ ಶಹರದಿಂದ ಕೇದಾರನಾಥಕ್ಕೆ ಹೆಲೆಕಾಪ್ಟರ್‌ನಲ್ಲಿ ಹೋಗಲು ನಿರ್ಧರಿಸಿದ್ದರು. ಅದಕ್ಕಾಗಿ, ಟಿಕೆಟ್ ಬುಕ್ ಮಾಡಲು ಆನ್‌ಲೈನ್‌ನಲ್ಲಿ ಹುಡುಕಾಡಿದ್ದಾರೆ. ಆಗ, ಅವರಿಗೆ ಟ್ರಾವೆಲ್ ಕಂಪನಿ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ಟಿಕೆಟ್ ಬುಕ್ ಮಾಡುವುದಾಗಿ ನಂಬಿಸಿದ್ದಾರೆ. ನಂತರ ಬಾಲಚಂದ್ರ ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ವಂಚನೆ: ಅಮೇಜಾನ್‌ನಲ್ಲಿ ಖರೀದಿಸಿದ್ದ ವಾಚ್ ಹಿಂದಿರುಗಿಸಲು ಆನ್‌ಲೈನ್‌ನಲ್ಲಿ ಮುಂದಾದ ವ್ಯಕ್ತಿಯೊಬ್ಬರಿಗೆ ಗ್ರಾಹಕರ ಸೇವಾ ಕೇಂದ್ರದ ಪ್ರತಿನಿಧಿ ಹೆಸರಿನಲ್ಲಿ ₹50,558 ವಂಚಿಸಿರುವ ಘಟನೆ ನಡೆದಿದೆ. ಮಂಜುನಾಥ ನಗರದ ಪಿ.ಎಸ್. ಜೋಶಿ ವಂಚನೆಗೊಳಗಾದವರು.

ವಾಚ್ ಹಿಂದಿರುಗಿಸಲು ಗೂಗಲ್‌ನಲ್ಲಿ ಗ್ರಾಹಕರ ಸೇವಾ ಕೇಂದ್ರದ ವಿಳಾಸವನ್ನು ಹುಡುಕುತ್ತಿದ್ದ ಜೋಶಿ ಅವರಿಗೆ, ಪ್ರತಿನಿಧಿ ಹೆಸರಿನಲ್ಲಿ ವಂಚಕ ಕರೆ ಮಾಡಿದ್ದಾನೆ. ನಂತರ, ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಸಿ, ಅದರಲ್ಲಿ ಡೆಬಿಟ್ ಕಾರ್ಡ್ ಸ್ಕ್ಯಾನ್ ಮಾಡಿಸಿದ್ದಾನೆ. ನಂತರ ಜೋಶಿ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT