ಬುಧವಾರ, ಏಪ್ರಿಲ್ 14, 2021
29 °C
‘ಸ್ಕೈ 360’ ಸಲ್ಯೂಷನ್‌ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿ

ಹುಬ್ಬಳ್ಳಿ: ‘ಸೂಪರ್‌ ಓವರ್‌’ನಲ್ಲೂ ಪಂದ್ಯ ಟೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಳಗಾವಿಯ ಆನಂದ್ ಅಕಾಡೆಮಿ ಮತ್ತು ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ತಂಡಗಳ ನಡುವಿನ ’ಸ್ಕೈ 360‘ ಸಲ್ಯೂಷನ್‌ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯವು ಎರಡೂ ಸಲ ಟೈನಲ್ಲಿ ಅಂತ್ಯ ಕಂಡಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ಹಂಚಲಾಯಿತು.

ಫಸ್ಟ್‌ ಕ್ರಿಕೆಟ್ ಅಕಾಡೆಮಿ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆನಂದ ಅಕಾಡೆಮಿ ತಂಡ ನಾಯಕ ಸಿದ್ದೇಶ ಅಸಲಕರ (51, 57ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ 29.4 ಓವರ್‌ಗಳಲ್ಲಿ 137 ರನ್‌ ಗಳಿಸಿ ಆಲೌಟ್ ಆಯಿತು. ಬಿಡಿಕೆ ತಂಡ ಕೂಡ 29.5 ಓವರ್‌ಗಳಲ್ಲಿ ಇಷ್ಟೇ ರನ್‌ ಗಳಿಸಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಪಂದ್ಯ ಟೈ ಆಯಿತು. ಫಲಿತಾಂಶ ನಿರ್ಧರಿಸಲು ‘ಸೂಪರ್‌ ಓವರ್‌’ ಮೊರೆ ಹೋಗಲಾಯಿತು. ಆಗಲೂ ಉಭಯ ತಂಡಗಳು ತಲಾ 11 ರನ್ ಗಳಿಸಿದ್ದರಿಂದ ಪಂದ್ಯ ‘ಟೈ’ನಲ್ಲಿ ಅಂತ್ಯ ಕಂಡಿತು.

ದಿನದ ಇನ್ನೊಂದು ಪಂದ್ಯದಲ್ಲಿ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಎದುರು ಚಾಂಪಿಯನ್ಸ್‌ ನೆಟ್‌ ತಂಡ ಒಂಬತ್ತು ವಿಕೆಟ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಎಸ್‌ಡಿಎಂ 30 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಗಳಿಸಿದ್ದ 83 ರನ್‌ಗಳನ್ನು ಚಾಂಪಿಯನ್ಸ್‌ ನೆಟ್ 14.1 ಓವರ್‌ಗಳಲ್ಲಿ ತಲುಪಿತು. ಈ ತಂಡದ ಲಕ್ಷ್ಮಿ ಬಾಗೇವಾಡಿ ಮೂರು, ಆರ್ಯನ್ ವೈದ್ಯ ಮತ್ತು ರಮೇಶ ಬಾಗೇವಾಡಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು