ಗುರುವಾರ , ಮಾರ್ಚ್ 23, 2023
20 °C

ಬಲಿ ಚಕ್ರವರ್ತಿಯ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸಮತಾ ಸೈನಿಕ ದಳ ಮತ್ತು ಭಾರತೀಯ ಮೂಲ ನಿವಾಸಿಗಳ ಒಕ್ಕೂಟದ ವತಿಯಿಂದ, ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಬಲಿ ಚಕ್ರವರ್ತಿ ಸ್ಮರಣೆ ಕಾರ್ಯಕ್ರಮ ನಡೆಯಿತು. ಚಕ್ರವರ್ತಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸದಸ್ಯರು, ಬಳಿಕ ಜೈಕಾರ ಕೂಗಿದರು.

ಒಕ್ಕೂಟದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಪೆರೂರ ಮಾತನಾಡಿ, ‘ಉತ್ತಮ ಆಡಳಿತಗಾರ ಹಾಗೂ ಸುಸಂಸ್ಕೃತನಾಗಿದ್ದ ಮೂಲನಿವಾಸಿ ರಾಜ ಬಲೀಂದ್ರನನ್ನು ವೈದಿಕರು ಕೆಟ್ಟದಾಗಿ ಬಿಂಬಿಸಿದ್ದಾರೆ. ರಾಜನನ್ನು ನೇರವಾಗಿ ಎದುರಿಸಲಾಗದ ವೈದಿಕರು, ಕುತಂತ್ರ ಮಾಡಿ ಬ್ರಾಹ್ಮಣ ಬಾಲಕನ ರೂಪದಲ್ಲಿ ರಾಜನನ್ನು ನಿರ್ಗತಿಕನ್ನಾಗಿ ಮಾಡಿದ ದಿನವೇ ದೀಪಾವಳಿ. ಈ ಸತ್ಯವನ್ನು ಮೂಲ ನಿವಾಸಿಗಳು ಅರಿಯಬೇಕಿದೆ’ ಎಂದರು.

ಸಮತಾ ಸೈನಿಕ ದಳದ ಉತ್ತರ ಕರ್ನಾಟಕ ಅಧ್ಯಕ್ಷ ಶಂಕರ ಅಜಮನಿ ಮಾತನಾಡಿ, ‘ಈ ದೇಶದ ಮೂಲನಿವಾಸಿ ಬೌದ್ಧ ರಾಜರನ್ನು ವೈದಿಕರು ನಿರ್ನಾಮ ಮಾಡಿ ವೈದಿಕ ಧರ್ಮವನ್ನು ಸ್ಥಾಪಿಸಿದ್ದಾರೆ. ಬೌದ್ದ ರಾಜರನ್ನು ಕೊಂದ ದಿನವನ್ನೇ ವಿವಿಧ ಹಬ್ಬಗಳಾಗಿ ಆಚರಿಸಲಾಗುತ್ತಿದೆ. ದೇಶದ ಹಲವೆಡೆ ಇರುವ ಪ್ರಸಿದ್ಧ ದೇವಾಲಯಗಳು ಹಿಂದೆ ಬೌದ್ಧ ವಿಹಾರಗಳಾಗಿದ್ದವು. ಶೋಷಿತ ಸಮುದಾಯದವರು ಶಿಕ್ಷಣ ಪಡೆದು ಜಾಗೃತರಾದ ಬಳಿಕ, ಇತಿಹಾಸದಲ್ಲಿ ಹುದುಗಿದ್ದ ಸತ್ಯಗಳು ಹೊರಬರುತ್ತಿವೆ’ ಎಂದು ಹೇಳಿದರು.

ರೇಣುಕಾ ವಂದಾಲ, ಮಲ್ಲಿಕಾರ್ಜುನ ಬಿಳಾರ, ನರಸಿಂಹ ಪಾಲವಾಯಿ, ಉಮೇಶ ಚಲವಾದಿ, ಸ್ಟೆಲ್ಲಾ ಮೇರಿ, ನಿರ್ಮಲಾ ಹಂಜಗಿ, ಸೋಮು ಹಂಜಗಿ, ಎಸ್‌.ಪಿ. ಹುಬ್ಳಿಕರ, ಮೇರಿ ಮುರಡಿ, ಅಶ್ವಿನಿ ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.