ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ

₹18 ಲಕ್ಷ ವೆಚ್ಚದ ಕಾರ್ಯಕ್ಕೆ ಸಚಿವ ಶೆಟ್ಟರ್‌ ಭೂಮಿಪೂಜೆ
Last Updated 2 ಜೂನ್ 2020, 16:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸನ್‌ಸಿಟಿ ಹೆರಿಟೇಜ್ ಬಡಾವಣೆಯ 150 ಮನೆಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್‌ ಜೋಡಣೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಹೆರಿಟೇಜ್‌ ನಿವೇಶನ ಅಭಿವೃದ್ಧಿ ಸಮಯದಲ್ಲಿ ಮಾಡಲಾಗಿದ್ದು ಪೈಪ್‌ಲೈನ್‌ಗಳು ಹಾಳಾಗಿದ್ದರಿಂದ ₹18 ಲಕ್ಷ ಅನುದಾನದಲ್ಲಿ 1,700 ಮೀಟರ್‌ ನೀರಿನ ಹೊಸ ಕೊಳವೆ ಮಾರ್ಗ ನಿರ್ಮಿಸಲಾಗುತ್ತಿದೆ. 150 ಮನೆಗಳಿಗೆ ನಳಸಂಪರ್ಕ ಒದಗಿಸಲಾಗುವುದು ಎಂದು ಶೆಟ್ಟರ್‌ ಹೇಳಿದರು. ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸುವಂತೆ ಜಲಮಂಡಳಿಯ ಸಹಾಯಕ ಎಂಜಿನಿಯರ್‌ ವಿ.ಎ.ಗಿಡ್ಡಲಿಂಗಣ್ಣವರ ಅವರಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಲ್ಲಿಕಾರ್ಜುನ ಸಾಹುಕಾರ್ ಇದ್ದರು.

ಕಿಟ್‌ ವಿತರಣೆ: ಬಾದಾಮಿ ನಗರದ ಬಾಲ ಉದ್ಯಾನದಲ್ಲಿ ಶೆಟ್ಟರ್‌ 150 ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ಆಹಾರ ಪದಾರ್ಥಗಳ ಕಿಟ್‌ ನೀಡಿದರು. ಬಿಜೆಪಿ ಮುಖಂಡರಾದ ಮೇನಕಾ ಹುರುಳಿ, ಸಂತೋಷ ಚವ್ಹಾಣ ಇದ್ದರು.

ಕಾಮಗಾರಿ ವೀಕ್ಷಣೆ: ₹10 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಬೈರಿದೇವರಕೊಪ್ಪ–ಗಾಮನಗಟ್ಟಿ ರಸ್ತೆ ದುರಸ್ತಿ ಕಾಮಗಾರಿಯನ್ನು ಶೆಟ್ಟರ್‌ ಪರಿಶೀಲಿಸಿದರು.

ಈ ವೇಳೆ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಗಳು ‘ಗಾಮನಗಟ್ಟಿ ರಸ್ತೆಯ ಸನಿಹ ಸೇತುವೆಯ ಎತ್ತರ ಹೆಚ್ಚಿಸಬೇಕು. ಆ ಸೇತುವೆಯನ್ನು ಕಾಂಕ್ರೀಟ್‌ನಿಂದ ನಿರ್ಮಿಸಬೇಕು’ ಎಂದು ಮನವಿ ಮಾಡಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಸಚಿವರು ಪಾಲಿಕೆ ವತಿಯಿಂದ ಕಾಂಕ್ರೀಟ್‌ ಸೇತುವೆ ನಿರ್ಮಿಸುವಂತೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಸೂಚಿಸಿದರು.

ವಿಧಾನ ಪರಿಷತ್ ಶಾಸಕ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ಮಹೇಶ ಕಲಬುರ್ಗಿ, ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಸಂಗೊಳ್ಳಿ ರಾಯಣ್ಣನಗರ ನಾಗರಿಕರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ವಿ.ಎಸ್. ಸಜ್ಜನಶೆಟ್ಟರ್, ವಿ.ಎಸ್.ಪಾಟೀಲ, ಎಸ್.ಡಿ.ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT