ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರಿನಲ್ಲಿ ನಿರ್ಮಿಸಿದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಬಂದವರ ಮೇಲೆ ಕಟೌಟ್ ಬಿದ್ದು ಗಂಭೀರ ಗಾಯಗೊಂಡು ಕೆಎಂಸಿ-ಆರ್ಐ ಹಾಗೂ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಗಂಭೀರ ಗಾಯಗೊಂಡಿರುವ ಬ್ಯಾಹಟ್ಟಿ ಗ್ರಾಮದ ಶಂಕರ ಹಡಪದ ಹಾಗೂ ಗಂಗಾಧರ ನಗರದ ಶಾಂತಾ ಕ್ಯಾರಕಟ್ಟಿ ಅವರನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಸಚಿವರು ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಕೆಎಂಸಿ-ಆರ್ಐ ಆಸ್ಪತ್ರೆಯಲ್ಲಿ ಶಾಂತಿನಗರದ ಮಂಜುನಾಥ ವೆರ್ಣೇಕರ ಅವರನ್ನು ದಾಖಲಿಸಲಾಗಿದೆ.

'ಮನೆಯಿಲ್ಲದವರಿಗೆ ಮನೆ ಹಂಚಿಕೆ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ, ಕಾರ್ಯಕ್ರಮ ಸ್ಥಳಕ್ಕೆ ತಾಯಿಯ ಜೊತೆ ಬಂದಿದ್ದೆ. ಆಟೊ ಇಳಿದು ಪೆಂಡಾಲ್ ಕಡೆ ತೆರಳುತ್ತಿದ್ದಾಗ ಎಡಗಡೆ ಅಳವಡಿಸಿದ್ದ ಬೃಹತ್ ಕಟೌಟ್ ಏಕಾಏಕಿ ಬಿದ್ದಿದೆ. ಅದರ ಅಡಿ ತಾಯಿ ಶಾಂತಾ ಅವರು ಸೇರಿ ಮೂರು ಮಂದಿ ಸಿಲುಕಿ ಗಾಯಗೊಂಡಿದ್ದಾರೆ. ನಾನು ಸೇರಿ ಕೆಲವು ಪೊಲೀಸರು ತಪ್ಪಿಸಿಕೊಂಡಿದ್ದೇವೆ' ಎಂದು ಗಾಯಾಳು ಶಾಂತಾ ಅವರ ಪುತ್ರ ಶಶಿಕಾಂತ ಕ್ಯಾರಕಟ್ಟಿ ಹೇಳಿದರು.
.ಹುಬ್ಬಳ್ಳಿ | ಮನೆ ಹಂಚಿಕೆ ಕಾರ್ಯಕ್ರಮ: ಕಟೌಟ್ ಬಿದ್ದು ಮೂವರು ಗಂಭೀರ ಗಾಯ.ರಾಜ್ಯ ಸರ್ಕಾರದಿಂದ ಲಿಕ್ಕರ್ ಗ್ಯಾರಂಟಿ ಯೋಜನೆ: ಶಾಸಕ ಟೆಂಗಿನಕಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.