ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸಿ.ಬಿ.ತಿಗಡಿ ನಿಧನ

Last Updated 28 ಆಗಸ್ಟ್ 2019, 19:06 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಸಿ.ಬಿ.ತಿಗಡಿ (92) ಬುಧವಾರ ಇಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಬೆಳಗಾವಿ ಜಿಲ್ಲೆಯ ಕಡೊಲಿ ಗ್ರಾಮದ ಅವರು, ಲಂಡನ್‌ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದು, ಕರ್ನಾಟಕ ವಿಶ್ವವಿದ್ಯಾಲ ಯದಲ್ಲಿ ಪ್ರಾಧ್ಯಾಪಕ ವೃತ್ತಿ ಆರಂಭಿಸಿದ್ದರು. ಅಮೆರಿಕಾದ ಫ್ಲಾರಿಡಾ ವಿ.ವಿ.ಗೆ ಸಂದರ್ಶಕ
ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.

1970ರಲ್ಲಿ ಕರ್ನಾಟಕ ವಿ.ವಿ. ಮ್ಯಾನೇಜಮೆಂಟ್ ಸಂಸ್ಥೆ ಯನ್ನು ಆರಂಭಿ ಸಲು ನಿರ್ಧರಿಸಿ ದಾಗ, ತಿಗಡಿ ಅವರನ್ನೇ ಅದರ ಉಸ್ತು ವಾರಿಯಾಗಿ ನೇಮಕ ಮಾಡಲಾಗಿತ್ತು. ಅವರ ಪ್ರಯತ್ನದಿಂದಾಗಿ ತಮ್ಮಪ್ಪ ಕೌಸಾಳೆ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜಮೆಂಟ್‌ ಕಾರ್ಯಾರಂಭ ಮಾಡಿತು.

ಬೆಂಗಳೂರಿನಲ್ಲಿ ಇಂಡಿಯಾ ಪಾಪುಲೇಷನ್ ಸೆಂಟರ್‌ ಅನ್ನು ತಿಗಡಿ ಆರಂಭಿಸಿದ್ದರು. ತಿಗಡಿ ಅವರ ಇಚ್ಛೆಯಂತೆ ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಎಸ್‌ಡಿಎಂ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT