ಬುಧವಾರ, ಸೆಪ್ಟೆಂಬರ್ 22, 2021
22 °C

ಪೈಲ್ವಾನ್‌ ಕೆ.ಎಂ. ಪಾಟೀಲ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಳಗಾವಿ ತಾಲ್ಲೂಕಿನ ಕಿಣಿಯೆ ಗ್ರಾಮದ ಹೆಸರಾಂತ ಪೈಲ್ವಾನ್‌ ಕೆ. ಎಂ. ಪಾಟೀಲ (75) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಪಾಟೀಲ ಅವರು ಬೆಳಗಾವಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕುಸ್ತಿ ಕೋಚ್‌ ಆಗಿದ್ದರು. ಅವರ ಗರಡಿಯಲ್ಲಿ ಪಳಗಿದ ರತನ್ ಕುಮಾರ ಮಠಪತಿ, ಶಿವಾಜಿ ಚಿಂಗಳೆ, ಎಂ.ಆರ್. ಪಾಟೀಲ, ವಿನಾಯಕ ದಳವಾಯಿ, ಜಿ.ಎಂ. ನಾಯ್ಕ ಮುಂತಾದವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಕೆ.ಎಂ. ಪಾಟೀಲ ಕುಸ್ತಿ ತರಬೇತಿ ಮುಗಿದ ಬಳಿಕ ಪೈಲ್ವಾನರಿಗೆ ಸಂಸ್ಕಾರ, ಬದುಕಿನ ಮೌಲ್ಯಗಳು ಮತ್ತು ಜೀವನ ಸಂಸ್ಕೃತಿ ಬಗ್ಗೆ ತರಗತಿಗಳನ್ನು ತೆಗೆದುಕೊಳ್ಳುವುದು ವಿಶೇಷವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.