ಗುರುವಾರ , ಜನವರಿ 30, 2020
20 °C
ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿ

ಪರೀಕ್ಷಿತ್‌ ಶತಕ: ಬಿಡಿಕೆ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭರವಸೆಯ ಬ್ಯಾಟ್ಸ್‌ಮನ್‌ ಪರೀಕ್ಷಿತ್‌ ಶೆಟ್ಟಿ (103) ಮತ್ತು ಅಕ್ಷಯ ಅಂಗಡಿ (ಅಜೇಯ 58) ಉತ್ತಮ ಬ್ಯಾಟಿಂಗ್‌ನಿಂದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯದ ಪ್ರಥಮ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಗೆಲುವು ಪಡೆಯಿತು.

ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡ 40.5 ಓವರ್‌ಗಳಲ್ಲಿ 195 ರನ್‌ ಗಳಿಸಿತು. ಈ ಗುರಿಯನ್ನು ಬಿಡಿಕೆ 22.5 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ತಲುಪಿತು.

ಇನ್ನೊಂದು ಪಂದ್ಯದಲ್ಲಿ ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡದ ಎದುರು ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡ 153 ರನ್‌ಗಳ ಗೆಲುವು ಸಾಧಿಸಿತು. ಈ ತಂಡ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ ಗಳಿಸಿದ್ದ 261 ಪ್ರತಿಯಾಗಿ ಎಸ್‌ಡಿಎಂ 38.2 ಓವರ್‌ಗಳಲ್ಲಿ 108 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಎಚ್‌ಎಸ್‌ಸಿ ತಂಡಕ್ಕೆ ಗೆಲುವು: 16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ 22.3 ಓವರ್‌ಗಳಲ್ಲಿ 83 ರನ್ ಗಳಿಸಿತ್ತು. ಅಲ್ಪ ಮೊತ್ತದ ಗುರಿಯನ್ನು ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) 11.1 ಓವರ್‌ಗಳಲ್ಲಿ ಮುಟ್ಟಿತು.

ಬಿ.ಜಿ. ಅಸೋಸಿಯೇಟ್ಸ್‌ ಮೈದಾನದಲ್ಲಿ ಆಯೋಜನೆಯಾಗಿದ್ದ ಎಸ್‌ಡಿಎಂ ಹಾಗೂ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡಗಳ ನಡುವಿನ ಪಂದ್ಯ ಮೈದಾನ ಒದ್ದೆಯಾಗಿದ್ದರಿಂದ ರದ್ದಾಯಿತು.

ಪ್ರತಿಕ್ರಿಯಿಸಿ (+)