ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಭಾಗಶಃ ರದ್ದು: ಕೊಂಕಣ ರೈಲ್ವೆ

Published 12 ಮಾರ್ಚ್ 2024, 15:57 IST
Last Updated 12 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಸುರಕ್ಷತಾ ಕಾಮಗಾರಿ ನಡೆಸುವ ಸಲುವಾಗಿ ಮಾರ್ಚ್ 13ರಿಂದ 16ರವರೆಗೆ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.

ಮಾರ್ಚ್ 12, 13, 14 ಮತ್ತು 15ರಂದು ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (16585) ರೈಲು ಭಟ್ಕಳ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಭಟ್ಕಳ ಮತ್ತು ಮುರುಡೇಶ್ವರ ನಿಲ್ದಾಣಗಳ ನಡುವಿನ ಸಂಚಾರ ರದ್ದಾಗಲಿದೆ.

ಮಾರ್ಚ್ 13, 14, 15 ಮತ್ತು 16ರಂದು ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್ (16586)  ರೈಲು ಭಟ್ಕಳ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಮುರುಡೇಶ್ವರ ಮತ್ತು ಭಟ್ಕಳ ನಿಲ್ದಾಣಗಳ ನಡುವೆ ಸಂಚಾರ ರದ್ದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT