ಶುಕ್ರವಾರ, ಮೇ 27, 2022
21 °C

ಕಾಲವಾಡ ಗ್ರಾ.ಪಂ: ಶಾಂತಿಯುತ ಮತದಾನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: ತಾಲ್ಲೂಕಿನ ಕಾಲವಾಡ ಗ್ರಾಮ ಪಂಚಾಯ್ತಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು. ವಾರ್ಡ್‌ 1ರಲ್ಲಿ ಶೇ 89.89 ಹಾಗೂ ವಾರ್ಡ 2 ರಲ್ಲಿ ಶೇ 78.50ರಷ್ಟು ಮತದಾನವಾಗಿದೆ.

ಒಟ್ಟು 10 ಸ್ಥಾನಗಳನ್ನು ಹೊಂದಿರುವ ಕಾಲವಾಡ ಗ್ರಾಮ ಪಂಚಾಯ್ತಿಯಲ್ಲಿ ಈ ಮೊದಲೇ ಕರ್ಲವಾಡ ಗ್ರಾಮದ 3 ಸದಸ್ಯರು ಅವಿರೋಧ ಆಯ್ಕೆಯಾದ ಕಾರಣ 7 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ವಾರ್ಡ್‌ 1ರಲ್ಲಿ 3 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು ಅದರಲ್ಲಿ 11 ಅಭ್ಯರ್ಥಿಗಳು, ವಾರ್ಡ 2 ರಲ್ಲಿ 4 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು ಅದರಲ್ಲಿ 12 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮತದಾನ ಮಾಡಲಾಗಿದ್ದು ಶಾಂತಿಯುತ ಮತದಾನ ನಡೆಯಿತು ಎಂದು ಚುನಾವಣಾಧಿಕಾರಿ ಎನ್.ವಿ.ಕುರವತ್ತಿಮಠ ತಿಳಿಸಿದರು.
ಇನ್ನು ತಡಹಾಳ ಗ್ರಾಮ ಪಂಚಾಯ್ತಿಯ ಅರಹಟ್ಟಿ ಗ್ರಾಮದ ಉಪಚುನಾವಣೆಯ 1 ಸ್ಥಾನಕ್ಕೆ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಲ್ಲಿ ಶೇ 73 ರಷ್ಟು ಮತದಾನವಾಗಿದೆ.

ಚುನಾವಣೆ ಬಹಿಷ್ಕಾರ: ಯಮನೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಆರೇಕುರಹಟ್ಟಿ ಗ್ರಾಮದಲ್ಲಿ ಒಟ್ಟು 8 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ ಯುಮನೂರ ಗ್ರಾಮ ಪಂಚಾಯ್ತಿ ಬದಲಾಗಿ ಆರೇಕುರಹಟ್ಟಿಯಲ್ಲಿಯೇ ಗ್ರಾಮ ಪಂಚಾಯ್ತಿ ಮಾಡಬೇಕೆಂದು ಪಟ್ಟು ಹಿಡಿದು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದ ಚುನಾವಣೆ ನಡೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು