ಗುರುವಾರ , ಸೆಪ್ಟೆಂಬರ್ 19, 2019
22 °C

ಪವರ್‌ಲಿಫ್ಟಿಂಗ್‌: ಹುಬ್ಬಳ್ಳಿಯ ದಿವ್ಯಾ ಜ್ಯೋತಿಗೆ ಚಿನ್ನ

Published:
Updated:
Prajavani

ಹುಬ್ಬಳ್ಳಿ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಇತ್ತೀಚಿಗೆ ಕುಂದಾಪುರದಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿಯ ದಿವ್ಯಾ ಜ್ಯೋತಿ ಫ್ರಾನ್ಸಿಸ್‌ 43 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಸ್ಕಾಟ್‌ನಲ್ಲಿ 105 ಕೆ.ಜಿ., ಬೆಂಚ್‌ ಪ್ರೆಸ್‌ನಲ್ಲಿ 45 ಕೆ.ಜಿ. ಮತ್ತು ಡೆಡ್‌ ಲಿಫ್ಟ್‌ನಲ್ಲಿ 110 ಕೆ.ಜಿ. ಭಾರ ಎತ್ತುವ ಮೂಲಕ ಅವರು ಈ ಸಾಧನೆ ಮಾಡಿದರು. ಒಟ್ಟು 260 ಕೆ.ಜಿ. ಭಾರ ಎತ್ತಿದರು.

ರಾಜ್ಯ ಮಟ್ಟದ ಟೂರ್ನಿಯಲ್ಲಿ ದಿವ್ಯಾ ಒಟ್ಟಾರೆಯಾಗಿ ಜಯಿಸಿದ ಮೂರನೇ ಚಿನ್ನದ ಪದಕವಿದು. 2018ರಲ್ಲಿ ಕೊಯಮತ್ತೂರಿನಲ್ಲಿ ನಡೆದಿದ್ದ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

‘ನಿತ್ಯ ಜಿಮ್‌ನಲ್ಲಿ ಸುಮಾರು ಎರಡೂವರೆ ಗಂಟೆ ದೈಹಿಕ ಕಸರತ್ತು ಮಾಡುತ್ತೇನೆ. ಪೌಷ್ಠಿಕ ಆಹಾರ, ಹಸಿ ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತೇನೆ. ಇದರಿಂದ ಉತ್ತಮ ದೈಹಿಕ ಶಕ್ತಿ ಗಳಿಸಲು ಸಾಧ್ಯವಾಗಿದೆ. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಕೇರಳದಲ್ಲಿ ರಾಷ್ಟ್ರೀಯ ಟೂರ್ನಿಯಿದೆ. ಕೆನಡಾದಲ್ಲಿ ವಿಶ್ವ ಚಾಂ‍ಪಿಯನ್‌ಷಿಪ್‌ ಜರುಗಲಿದೆ. ಈ ಎರಡೂ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ. ಅದಕ್ಕೆ ಈಗ ಗೆದ್ದ ಪದಕ ಸ್ಫೂರ್ತಿಯಾಗಲಿದೆ’ ಎಂದು ದಿವ್ಯಾ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

Post Comments (+)