ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಬರ: ಪ್ರಲ್ಹಾದ್ ಜೋಶಿ ವ್ಯಂಗ್ಯ

Published 18 ಮಾರ್ಚ್ 2024, 12:49 IST
Last Updated 18 ಮಾರ್ಚ್ 2024, 12:49 IST
ಅಕ್ಷರ ಗಾತ್ರ

ಧಾರವಾಡ: ‘ಕಾಂಗ್ರೆಸ್‌ಗೆ ಬಹಳಷ್ಟು ಕಡೆ ಅಭ್ಯರ್ಥಿಗಳೇ ಇಲ್ಲ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲವೇ ಇಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕಾಂಗ್ರೆಸ್‌ನ ಸ್ಥಿತಿಯಿಂದಾಗಿ ಪಕ್ಷದ ಕಾರ್ಯಕರ್ತರು ನಿರಾಶರಾಗಿದ್ಧಾರೆ. ಬಿಜೆಪಿಯಿಂದ ಕಣಕ್ಕಿಳಿಯುವವರು ಗೆಲ್ಲುವ ವಾತಾವರಣ ಇದೆ, ಆಕಾಂಕ್ಷಿಗಳೂ ಹೆಚ್ಚುಇದ್ಧಾರೆ. ಕೆಲವು ಕಡೆ ಸಮಸ್ಯೆಯಾಗಿದೆ, ಪಕ್ಷದ ವರಿಷ್ಠರು ಸಮಸ್ಯೆಯನ್ನು ಪರಿಹರಿಸುತ್ತಾರೆ’ ಎಂದರು.

‘ಕೆ.ಎಸ್‌.ಈಶ್ವರಪ್ಪ ಅವರು ಪಕ್ಷ ಮತ್ತು ವಿಚಾರಕ್ಕೆ ಬದ್ಧರಾಗಿರುವ ವ್ಯಕ್ತಿ. ಅವರ ಜೊತೆ ಪಕ್ಷದ ರಾಷ್ಟ್ರೀಯ ನಾಯಕರು ಮಾತನಾಡುವರು, ಎಲ್ಲ ಸರಿಯಾಗುವ ವಿಶ್ವಾಸವಿದೆ’ ಎಂದು ಪ್ರತಿಕ್ರಿಯಿಸಿದರು.

‘ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರವು ವಿವರಣೆ ನೀಡಲು ತಡ ಮಾಡಿದ್ದರಿಂದ, ಪ್ರಾಧಿಕಾರವು ಕಾಲಾವಕಾಶ ತೆಗೆದುಕೊಂಡಿದ್ದರಿಂದ ಮಹದಾಯಿ ಯೋಜನೆ ಜಾರಿ ವಿಳಂಬವಾಗಿದೆ. ವನ್ಯಜೀವಿ ಮಂಡಳಿ ಅನುಮೋದನೆ ನೀಡಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಮೋದಿ ಸರ್ಕಾರ ಸಾಧನೆ, ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಕುರಿತು ಜನರು ಮಾತನಾಡುತ್ತಾರೆ. ಮತದಾರರು ಬಿಜೆಪಿಗೆ ಮತಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಚಾರ ಅದ್ಭುತವಾಗಿ ನಡೆದಿದೆ. ಜನರ ಸ್ಪಂದನೆ ಉತ್ತಮವಾಗಿದೆ. ಈ ಬಾರಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ಅವರು ಈ ಭಾಗಕ್ಕೂ ಪ್ರಚಾರಕ್ಕೆ ಆಗಮಿಸುವರು. ಧಾರವಾಡ, ಹಾವೇರಿ ಸಹಿತ ನಾಲ್ಕು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವರು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT