ಧಾರವಾಡ: ‘ನಾವೀನ್ಯತೆ ಮತ್ತು ವಿನ್ಯಾಸ ಚಿಂತನೆ ಶೈಕ್ಷಣಿಕ ಸಾಧನಗಳಷ್ಟೇ ಅಲ್ಲ, ಪರಿವರ್ತನೆಗೆ ವೇಗವರ್ಧಕಗಳೂ ಹೌದು’ ಎಂದು ಎಸ್ಡಿಎಂಸಿಇಟಿ ಪ್ರಾಂಶುಪಾಲ ರಮೇಶ್ ಎಲ್. ಚಕ್ರಸಾಲಿ ಹೇಳಿದರು.

ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ (ಎಸ್ಡಿಎಂಸಿಇಟಿ) ಈಚೆಗೆ ಆಯೋಜಿಸಿದ್ದ ನಾವೀನ್ಯತೆ ಮತ್ತು ಸುಸ್ಥಿರತೆ ಕುರಿತ ವಿನ್ಯಾಸ ಚಿಂತನಾ ಕಾರ್ಯಾಗಾರದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದ ಹೊಸತುಗಳನ್ನು ತಿಳಿದುಕೊಳ್ಳಬೇಕು. ಕೌಶಲ ಕಲಿತು, ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರ್ ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಉದಾತ್ತ ಚಿಂತನೆ ಬೆಳೆಸಿಕೊಳ್ಳಬೇಕು. ಸಂಶೋಧನೆ ಕಡೆಗೆ ಗಮನ ಹರಿಸಬೇಕು’ ಎಂದರು.

ಇನ್ನೋವಾಸ್ ಸ್ಕೇಪ್ನ ರೋಹಿತ್ ಆರ್., ವಾಣಿಶ್ರೀ, ಸುಪ್ರಿಯಾ ವೈದ್ಯ, ಐಐಸಿ ಮುಖ್ಯಸ್ಥ ಸತೀಶ್ ಎಸ್. ಭೈರಣ್ಣವರ್, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಜೆ.ಡಿ. ಪೂಜಾರಿ, ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥ ಎಸ್.ಆರ್. ಬಿರಾದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.