ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣ’

Published 22 ನವೆಂಬರ್ 2023, 14:38 IST
Last Updated 22 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಧಾರವಾಡ: ‘ಬಸವಣ್ಣನವರು ವಿಶ್ವಕ್ಕೆ ವಚನ ಸಾಹಿತ್ಯವನ್ನು ಕೊಡುಗೆ ನೀಡಿದರು. ಸಮಾಜದ ಏಳಿಗೆಗೆ ಶ್ರಮಿಸಿದರು’ ಎಂದು ಸಾಹಿತಿ ಎಸ್.ಆರ್. ಗುಂಜಾಳ್ ಹೇಳಿದರು.

ನಗರದ ಲಿಂಗಾಯತ ಟೌನ್‌ಹಾಲ್ ಆವರಣದಲ್ಲಿ ಪ್ರವಚನ ಸಮಿತಿ ಏರ್ಪಡಿಸಿರುವ ನಿಜಗುಣಾನಂದ ಸ್ವಾಮಿಜಿ ಅವರ ವಿಶ್ವಧರ್ಮ ಪ್ರವಚನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಸಕಲ ಜೀವರಾಶಿಗೆ ಲೇಸು ಬಯಸಿದ ವಿಶ್ವ ಗುರು ಬಸವಣ್ಣ, ಮೂಢನಂಬಿಕೆ, ಕಂದಾಚಾರಗಳಿಂದ ತುಂಬಿದ್ದ ಸಮಾಜದ ಸುಧಾರಣೆಗೆ ಹೋರಾಡಿದರು. 12ನೇ ಶತಮಾನದಲ್ಲಿ ಸ್ತ್ರೀ ಸಮಾನತೆಗಾಗಿ ಶ್ರಮಿಸಿದರು. ಅವರ ವಚನಗಳು ದಾರಿದೀಪವಾಗಿವೆ’ ಎಂದರು.

ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಯುವಕರು ಹಾಗೂ ಮಕ್ಕಳಿಗೆ ಬಸವ ಸಂಸ್ಕೃತಿ, ಸಂಸ್ಕಾರ ತಿಳಿಸುವ ಅಗತ್ಯವಿದೆ. ಉತ್ತಮ ಪ್ರಜೆಗಳಾಗಿ, ಸಮಾಜದ ಒಳಿತಿಗಾಗಿ ದುಡಿಯುವ ಪೀಳಿಗೆ ಸಿದ್ಧವಾಗಬೇಕು. ಅವರನ್ನು ಪ್ರವಚನ ಕಾರ್ಯಕ್ರಮಕ್ಕೆ ಕರೆತರಬೇಕು’ ಎಂದು ಹೇಳಿದರು.

ರಾಜಶೇಖರ ಬೆಳ್ಳಕ್ಕಿ, ವೀರಣ್ಣ ರಾಜೂರ, ಶಿವಶಂಕರ್ ಹಂಪನ್ನವರ, ರಾಜು ಮರಳಪ್ಪನವರ, ನಾಗರಾಜ ಪಟ್ಟಣಶೆಟ್ಟಿ, ಹನಮಂತ ಮಾರಡಗಿ, ಗುರುರಾಜ ಹುಣಸಿಮರದ, ಶಿವಶರಣ್, ಶಂಭುಲಿಂಗ ಹೆಗಡಾಳ್, ಗಿರೀಶ್ ದೇಸೂರ, ಶಿವರುದ್ರಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT