ಹುಬ್ಬಳ್ಳಿ: ಇ ಫಾರ್ಮಸಿ ನೀತಿ ವಿರೋಧಿಸಿ ಔಷಧ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ದುರ್ಗದಬೈಲ್ ಬಳಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆನ್‌ಲೈನ್ ಮೂಲಕ ಔಷಧಿ ಖರೀದಿಸಲು ಅವಕಾಶ ನೀಡುವ ಇ ಫಾರ್ಮಸಿ ನೀತಿ, ಸಾಂಪ್ರದಾಯಿಕ ಔಷಧ ವ್ಯಾಪಾರಿಗಳಿಗೆ ಮಾರಕವಾಗಿದೆ. ಲಕ್ಷಾಂತರ ಕುಟುಂಬಗಳು ಈ ಉದ್ಯಮವನ್ನೇ ಅವಲಂಬಿಸಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾ ಇ ಫಾರ್ಮಸಿ ಗೆ ಅವಕಾಶ ನೀಡಬಾರದುಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

'ನಮ್ಮನ್ನು ಉಳಿಸಲಿ ಎಂದು ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ, ಆದರೆ ಈ ಸರ್ಕಾರ ನಮ್ಮನ್ನು ಅಳಿಸಲು ಹೊಟಿದೆ. ದೇಶದಲ್ಕಿ ಸುಮಾರು 9 ಲಕ್ಷ ಔಷಧ ಅಂಗಡಿಗಳಿವೆ. ಪರೋಕ್ಣವಾಗಿ ಅದಕ್ಕಿಂತ ಹೆಚ್ಚಿನ ಕುಟುಂಬಗಳು ಈ ಉದ್ಯಮವನ್ನು ಅವಲಂಬಿಸಿವೆ. ಸರ್ಕಾರದ ನೀತಿ ಈ ಎಲ್ಲರಿಗೂ ಮಾರಕವಾಗಿ ಪರಿಣಮಿಸಲಿದೆ' ಎಂದು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಭೂಸನೂರ ಹೇಳಿದರು.

'ಇದು ಕೇವಲ ವ್ಯಾಪಾರಿಗಳಿಗೆ ಮಾತ್ರವಲ್ಲ ಸಮಾಜಕ್ಕೂ ಮಾರಕವಾಗಿದೆ. ಅಮಲು ಭರಿಸುವ ಔಷಧಗಳನ್ನು ಯಾರು ಬೇಕಾದರೂ ವೈದ್ಯರ ಸೂಚನೆ ಇಲ್ಲದೆ ಖರೀದಿಸಬಹುದು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.