ಬುಧವಾರ, ಮಾರ್ಚ್ 29, 2023
23 °C

ಪುಷ್ಪಾವಳಿ ಪ್ರದರ್ಶನ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಕಲಾವಿದೆ ಕೆ.ವಿ.ಮಂಜುಳಾ ಅವರ ‘ಪುಷ್ಪಾವಳಿ’ ಶೀರ್ಷಿಕೆಯ ಜಲವರ್ಣ ಕಲಾಕೃತಿಗಳ ಪ್ರದರ್ಶನವನ್ನು ಡಿ. 14ರಿಂದ ಆಯೋಜಿಸಲಾಗಿದೆ’ ಎಂದು ಕಲಾವಿದ ಎಂ.ಎಸ್.ಲಂಗೋಟಿ ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ಆಯೋಜಿಸಲಾಗಿರುವ ಈ ಕಲಾ ಪ್ರದರ್ಶನದಲ್ಲಿ ಬಳ್ಳಿ ಹೂವುಗಳ ಕುರಿತ 35 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಡಿ. 16ರವರಗೆ ಪ್ರದರ್ಶನ ನಡೆಯಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಲಾವಿದೆ ಮಂಜುಳಾ ಮಾತನಾಡಿ, ‘ನಿಸರ್ಗದಲ್ಲಿನ ಹೂವಿನ ಚೆಲುವನ್ನು ವಿವಿಧ ಕೋನಗಳಿಂದ ಕಂಡು ಅನುಭವಿಸಿ, ಅದಕ್ಕೆ ಕಲಾಕೃತಿ ರೂಪ ನೀಡಲಾಗಿದೆ. ಮೂಲ ಬಣ್ಣಗಳ ಜತೆಗೆ ಮಿಶ್ರ ಬಣ್ಣಗಳ ಬಳಕೆ ಮಾಡಲಾಗಿದೆ. ಪ್ರತಿ ವರ್ಷವೂ ಒಂದೊಂದು ವಿಷಯ ಕುರಿತು ಕಲಾಕೃತಿಗಳನ್ನು ರಚಿಸುತ್ತಾ ಬರುತ್ತಿದ್ದೇನೆ. ಇವುಗಳನ್ನು ಬೆಂಗಳೂರು, ಮೈಸೂರು, ಗೋವಾ, ಮುಂಬೈ, ಹುಬ್ಬಳ್ಳಿಯಲ್ಲಿ ಪ್ರದರ್ಶನ ಮಾಡಲಾಗಿದೆ’ ಎಂದರು.

‘ಪುಷ್ಪಾವಳಿ ಕಲಾಕೃತಿ ಪ್ರದರ್ಶನಕ್ಕೆ ಡಿ. 14ರಂದು ಬೆಳಿಗ್ಗೆ 11ಕ್ಕೆ ಹಿರಿಯ ಕಲಾವಿದ ಈಶ್ವರ ಎನ್. ಜೋಶಿ ಚಾಲನೆ ನೀಡಲಿದ್ದಾರೆ. ಗಾಯತ್ರಿ ಮಧು ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವರಾಜ ಕುರಿಯವರ, ಬಿ.ಮಾರುತಿ, ಮಡಿವಾಳಪ್ಪ ಎಸ್.ಲಂಗೋಟೆ ಇರಲಿದ್ದಾರೆ’ ಎಂದು ಮಂಜುಳಾ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು