ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭ

ಹುಬ್ಬಳ್ಳಿ: ದೇಶಪಾಂಡೆ ನಗರದ ಕೃಷ್ಣಕಲ್ಯಾಣ ಮಂಟಪದ ಮುಂಭಾಗದಿಂದ ಭವಾನಿ ನಗರಕ್ಕೆ ತೆರಳಲು ಅನುಕೂಲವಾಗುಂತೆ ರೈಲ್ವೆ ಕೆಳಸೇತುವೆ ನಿರ್ಮಿಸುವ ಕಾರ್ಯ ಆರಂಭವಾಗಿದೆ.
₹6.5 ಕೋಟಿ ವೆಚ್ಚದ ಕಾರ್ಯಕ್ಕೆ ಇದೇ ವರ್ಷದ ಫೆಬ್ರುವರಿಯಲ್ಲಿ ಭೂಮಿಪೂಜೆ ನಡೆದಿತ್ತು. ಸೇತುವೆ 7.5 ಮೀಟರ್ ಅಗಲ ಮತ್ತು 4 ಮೀಟರ್ ಎತ್ತರ ಇರಲಿದೆ. ಸೇತುವೆ ನಿರ್ಮಾಣವಾಗುವ ಜಾಗದಲ್ಲಿ ಸದ್ಯ ಮಣ್ಣಿನ ಗುಡ್ಡವಿದ್ದು, ಮಣ್ಣು ತೆರವು ಮಾಡುವ ಕೆಲಸ ಗುರುವಾರ ನಡೆದಿತ್ತು. ಈ ಕಾಮಗಾರಿ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಬೇಕಿದೆ.
‘ಫೆಬ್ರುವರಿಯಲ್ಲಿ ಭೂಮಿಪೂಜೆ ನೆರವೇರಿದ ಕಾಮಗಾರಿ ಕೋವಿಡ್ ಕಾರಣದಿಂದ ತಡವಾಗಿ ಆರಂಭವಾಗಿದೆ. ಕೆಳಸೇತುವೆ ನಿರ್ಮಾಣ ಪೂರ್ಣಗೊಂಡರೆ ಕೃಷ್ಣ ಕಲ್ಯಾಣ ಮಂಟಪದಿಂದ ಭವಾನಿಗರದ ಸವೆಂತ್ ಡೆ ಅಡ್ವೆಂಟಿಸ್ಟ್ ಹೈಸ್ಕೂಲ್ ಸಮೀಪದ ರಸ್ತೆಗೆ ನೇರ ಸಂಪರ್ಕ ಸುಲಭವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎಂದು ಕಾಮಗಾರಿಯ ಗುತ್ತಿಗೆದಾರ ವಿ.ಎಸ್.ವಿ. ಪ್ರಸಾದ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.