ಸತ್ಯ ತಿರುಚಿ ಸುಳ್ಳನ್ನೇ ಸತ್ಯ ಎಂದು ನಂಬಿಸುವ ಕಾಲ ಇದು. ಅಂತರಂಗದ ಸತ್ಯ ಸಂವೇದನೆಗಳನ್ನು ತಿರುಚಿ ಬೇರೆ ರೀತಿಯಲ್ಲಿ ಬರೆಯಬೇಕಾದ ಅನಿವಾರ್ಯಕ್ಕೆ ಈ ಸಂದರ್ಭ ಒಳಗಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು.
ಎಂ.ಡಿ. ಒಕ್ಕುಂದ, ಕಾರ್ಯಾಧ್ಯಕ್ಷ, ಕವಿವಿ ವ್ಯಾಪ್ತಿಯ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು
ಅಧ್ಯಾಪಕರು ಬರೆಯಬೇಕು. ಸಮಾಜದಲ್ಲಿ ಸಮಸ್ಯೆಗಳು (ಮೊಬೈಲ್ ಅತೀವ ಬಳಕೆ ಶೋಷಣೆ...) ಹಾಗೂ ಪ್ರಸ್ತುತ ಸಂಗತಿಗಳ ಕುರಿತು ಕತೆ ಕವನ ಲೇಖನಗಳನ್ನು ಬರೆಯಬೇಕು
ಪ್ರೊ. ಎ.ಎಂ. ಖಾನ್, ಕುಲಪತಿ ಕವಿವಿ
ಕಾಲದ ಚಹರೆಗಳನ್ನು ಗುರುತಿಸಬೇಕು. ಇಲ್ಲದಿದ್ದರೆ ಕಾಲಕ್ಕೆ ಅನ್ಯಾಯ ಮಾಡಿದಂತೆ. ಯುವಬರಹಗಾರರು ಸಮಾಜದ ಎಲ್ಲ ಸಂಕಷ್ಟಗಳ ಕುರಿತು ಬರೆಯುತ್ತಿದ್ಧಾರೆ. ಯುವಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು
ಎಲ್.ಎನ್. ಮುಕುಂದರಾಜ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ