ಕರ್ನಾಟಕ ಮತ್ತು ಚಂಡೀಗಡ ತಂಡಗಳು ಎರಡನೇ ಬಾರಿ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. 2024ರ ಫೆ.16ರಿಂದ 19ರವರೆಗೆ ನಡೆದಿದ್ದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡ ಮೂರು ಅಂಕ ಗಳಿಸಿತ್ತು. ಆ ಪಂದ್ಯದಲ್ಲಿ ವೈಶಾಖ ವಿಜಯಕುಮಾರ್ ಅಮೋಘ ಶತಕ (103) ಸಿಡಿಸಿದ್ದರು. ಅಲ್ಲದೆ 77ಕ್ಕೆ 4 ವಿಕೆಟ್ ಕಬಳಿಸಿದ್ದರು. ಎಸ್.ಶರತ್ (100) ಮನಿಷ್ ಪಾಂಡೆ (148) ಸಹ ಶತಕ ಗಳಿಸಿದ್ದರು.