ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿ ಚಾಂಪಿಯನ್ಸ್‌ ಲೀಗ್‌ 26ರಿಂದ

ಕ್ರಿಕೆಟ್‌: ಹುಬ್ಬಳ್ಳಿ, ಧಾರವಾಡದ ತಂಡಗಳು ಭಾಗಿ
Last Updated 14 ಫೆಬ್ರುವರಿ 2022, 4:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ಆತಿಥ್ಯದಲ್ಲಿ ಫೆ. 26 ಹಾಗೂ 27ರಂದು ನಗರದಲ್ಲಿ ರೋಟರಿ ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಜರುಗಲಿದೆ.

ಇಲ್ಲಿನ ಶಿರೂರು ಲೇ ಔಟ್‌ನಲ್ಲಿರುವ ಬಾಣಡಿ ಡಿ. ಕಿಮ್ಜಿ ಮತ್ತು ರೈಲ್ವೆ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿದ್ದು, ಮೂರು ತಂಡಗಳಂತೆ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಪ್ರತಿ ತಂಡ ಗುಂಪು ಹಂತದಲ್ಲಿ ತಲಾ ಎರಡು ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ‘ಸೂಪರ್ –8’ ಹಂತಕ್ಕೆ ಅರ್ಹತೆ ಗಳಿಸಲಿವೆ. ತಂಡಗಳ ವೇಳಾಪಟ್ಟಿ, ಪೋಷಾಕು ಹಾಗೂ ಟ್ರೋಫಿ ಅನಾವರಣ ಭಾನುವಾರ ಹುಬ್ಬಳ್ಳಿಯಲ್ಲಿ ನಡೆಯಿತು.

ಹಾರ್ಡ್‌ ಟೆನಿಸ್ ಚೆಂಡಿನಲ್ಲಿ ಟೂರ್ನಿ ಜರುಗಲಿದ್ದು, ಗೆಲುವು ಪಡೆದ ತಂಡಕ್ಕೆ ಎರಡು ಅಂಕಗಳು ಲಭಿಸಲಿವೆ. ’ಸೂಪರ್‌–8’ ಹಂತದಲ್ಲಿ ಗೆಲುವು ಸಾಧಿಸುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಆಲ್‌ರೌಂಡರ್‌ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರತಿ ಪಂದ್ಯ ತಲಾ ಹತ್ತು ಓವರ್‌ಗಳು ಆಗಿರುತ್ತದೆ.

ದಾಂಡೇಲಿ ಟಸ್ಕರ್ಸ್‌, ಕೊಂಕಣ ವಾರಿಯರ್ಸ್‌, ಅಂಕೋಲಾ ಫೈಟರ್ಸ್‌, ಬೆಳಗಾವಿ ಟ್ರೆಂಡ್‌ ಸೆಟ್ಟರ್ಸ್‌, ಹಂಚಿನಮನಿ ಧಾರವಾಡ ಸೂಪರ್‌ ಕಿಂಗ್ಸ್‌, ಹುಬ್ಬಳ್ಳಿ ಟೈಗರ್ಸ್, ಇಳಕಲ್‌ ಲಯನ್ಸ್‌, ಜಮಖಂಡಿ ರಾಯಲ್ಸ್‌, ಕೊಲ್ಹಾಪುರ ಸೆಂಟ್ರಲ್‌ ಸೂಪರ್‌ ಸ್ಟಾರ್ಸ್‌, ಕೊಂಕಣ ಶ್ರೀರಾಮ ಕೋಲ್ಟ್ಸ್‌, ಹುಬ್ಬಳ್ಳಿ ಮ್ಯಾಟ್ರಿಕ್ಸ್‌ ಮತ್ತು ಆರ್‌.ಸಿ. ಗೋವಾ ಚಾಲೆಂಜರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

ರೋಟರಿ ಮಿಡ್‌ಟೌನ್‌ ಅಧ್ಯಕ್ಷ ಸುಶೀಲ್‌ ಮಾತನಾಡಿ ‘ಟೂರ್ನಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲಾ ತಂಡಗಳ ಫ್ರಾಂಚೈಸ್‌ಗಳ ಮುಂದೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಎಲ್ಲರೂ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎನ್ನುವುದು ನಮ್ಮ ಆಶಯ’ ಎಂದರು.

ಅನುಪಮ್‌ ಶ್ರೀವಾತ್ಸವ, ಮಹೇಶ ಅಂಗೋಲಕರ, ವಿಲಾಸ, ಆರ್‌. ಪ್ರಕಾಶ, ಸಂಜೋತ್‌ ಷಾ, ಸೋಮಶೇಖರ್‌, ವಿಶ್ವನಾಥ ಅಂಡಕಿ, ಅರುಣ ಕುಲಕರ್ಣಿ ಸೇರಿದಂತೆ ರೋಟರಿಯ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT