ವಸತಿ ಸಮುಚ್ಛಯದ ಮನೆಯೊಂದರ ಬಾಗಿಲು ಹಾಳಾಗಿರುವುದು
ವಸತಿ ಸಮುಚ್ಚಯದ ಮನೆಯೊಂದರ ಕೊಠಡಿಯಲ್ಲಿ ಹಕ್ಕಿ ಗೂಡುಕಟ್ಟಿರುವುದು
ಬಾಗಿಲಿಗೆ ಹಾಕಿರುವ ಬೀಗ ಮುರಿದಿರುವುದು

ಭೂಸ್ವಾಧೀನದಲ್ಲಿ ಎಷ್ಟು ಮನೆಗಳು ಹೋಗುತ್ತದೆ ಎಂದು ಸಮೀಕ್ಷೆ ನಡೆಸಿ ವರದಿ ನೀಡಲು ಪಾಲಿಕೆ ಆಯುಕ್ತರಿಗೆ ಸೂಚಿಸುತ್ತೇನೆ. ಸ್ಮಾರ್ಟ್‌ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳ ಜೊತೆ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ
ಮಹೇಶ ಟೆಂಗಿನಕಾಯಿ ಶಾಸಕ
ರಸ್ತೆ ವಿಸ್ತೀರ್ಣ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರದ್ದಾಗಿದ್ದು ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಮನೆ ಕಳೆದುಕೊಳ್ಳುವ ಕೊಳೆಗೇರಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಶೀಘ್ರ ಹಂಚಿಕೆ ಮಾಡಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆಸಕಲ ಸೌಲಭ್ಯ ಇಲ್ಲಿವೆ
ವಸತಿ ಸಮುಚ್ಚಯಕ್ಕೆ ನಾಲ್ಕು ಲಿಫ್ಟ್ ಅಳವಡಿಸಿದ್ದು ತುರ್ತು ಸಂದರ್ಭದಲ್ಲಿ ಅಗ್ನಿ ಅನಾಹುತ ತಪ್ಪಿಸಲು ಅಗ್ನಿಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ. ಪ್ರತಿ ಮನೆಯ ಹಾಲ್‌ಗೆ ಫ್ಯಾನ್ ಸ್ನಾನಗೃಹಕ್ಕೆ ವಾಲ್‌ಮಿಕ್ಸರ್ ಅಳವಡಿಸಿದ್ದು ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸಿ ಸುಸಜ್ಜಿತವಾದ ಅಡುಗೆ ಮನೆ ನಿರ್ಮಿಸಲಾಗಿದೆ. ಪ್ರತಿ ಮನೆಗೂ ಬಾಲ್ಕನಿ ಇದ್ದು ಬಿಸಿನೀರಿಗಾಗಿ ಸೋಲಾರ್ ಅನ್ನು ಸಹ ಅಳವಡಿಸಲಾಗಿದೆ. ಒಳಚರಂಡಿ ವ್ಯವಸ್ಥೆ ಜೊತೆಗೆ ಆವರಣದಲ್ಲಿ ಬಿದ್ದ ಮಳೆ ನೀರು ಹರಿದು ಹೋಗಲು ಅಲ್ಲಲ್ಲಿ ಮ್ಯಾನ್‌ಹೋಲ್ ನಿರ್ಮಿಸಲಾಗಿದೆ. ಪುಟ್ಟದಾದ ಉದ್ಯಾನ ನಿರ್ಮಿಸಿ ಅಂದ ಹೆಚ್ಚಿಸಲಾಗಿದೆ.
ಪ್ರತಿಷ್ಠೆ; ಸಂತ್ರಸ್ತರು ಹೈರಾಣು
‘ಹಳೆ ಪಿಬಿ ರಸ್ತೆಗೆ ಸಮಾನಾಂತರವಾಗಿ ಸಾಗಲು ವಾಣಿವಿಲಾಸ ವೃತ್ತದಿಂದ ಉಣಕಲ್ ಕ್ರಾಸ್‌ವರೆಗಿನ ರಸ್ತೆಯನ್ನು ನಾಲ್ಕು ಪಥಕ್ಕೆ ವಿಸ್ತರಿಸಲಾಗುತ್ತದೆ. ಈಗಾಗಲೇ ಬಿಆರ್‌ಟಿಎಸ್ ಡಿಪೋದಿಂದ ಉಣಕಲ್ ಕ್ರಾಸ್‌ವರೆಗೆ ರಸ್ತೆಯಾಗಿದೆ. ಆದರೆ ವಾಣಿವಿಲಾಸ ವೃತ್ತದಿಂದ ಡಿಪೋವರೆಗಿನ ಕಾಮಗಾರಿ ಅರ್ಧಂಬರ್ಧವಾಗಿದೆ. ಅಲ್ಲಿರುವ ಕೊಳೆಗೇರಿ ನಿವಾಸಿಗಳನ್ನು ಎಬ್ಬಿಸಿ ಭೂಸ್ವಾಧೀನ ಮಾಡಿಕೊಳ್ಳಲು ಜನಪ್ರತಿನಿಧಿಗಳ ನಡುವೆ ರಾಜಕೀಯ ಮತ್ತು ಪ್ರತಿಷ್ಠೆ ಏರ್ಪಟ್ಟಿದೆ. ಮನೆಕಳೆದುಕೊಳ್ಳುವವರಿಂದ ಕೆಲವರು ಹೊಸ ಮನೆ ನೀಡುತ್ತೇವೆ ಎಂದು ಹಣ ಪಡೆದಿದ್ದಾರೆ. ಇವುಗಳ ಗೊಂದಲದಿಂದಾಗಿ ಪಾಲಿಕೆಗೆ ನಿಜವಾದ ಸಂತ್ರಸ್ತರನ್ನು ಗುರುತಿಸಲಾಗುತ್ತಿಲ್ಲ’ ಎಂದು ಬಲ್ಲ ಮೂಲಗಳು ತಿಳಿಸಿವೆ.